ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ, ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಇಂದಿನಿಂದ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಉತ್ಸವ ಶುರುವಾಗಿದೆ. ಸಿಎಂ ಸಿದ್ದರಾಮಯ್ಯನವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
ಇಂದು ಸಾರಿಗೆ ಇಲಾಖೆಯ ಹೊಸ 148 ಬಸ್‌ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಅವುಗಳಲ್ಲಿ 100 ಕೆಎಸ್‌ಆರ್‌ಟಿಸಿ, 40 ನಾನ್ ಎಸಿ ಪಲ್ಲಕ್ಕಿ ಹೆಸರಿನ ಸ್ಲೀಪರ್ ಕೋಚ್, 4 ಎಸಿ ಸ್ಲೀಪರ್ ಕೋಚ್ ಬಸ್‌ಗಳಿಗೆ ಚಾಲನೆ ಸಿಕ್ಕಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಹೊಸ ಬಸ್ಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಾರಿಗೆ ಅಧಿಕಾರಿಗಳು ಭಾಗಿಯಾಗಿದ್ದರು.
ನಾಲ್ಕು ನಾನ್ ಎಸಿ ಸ್ಲೀಪರ್ ಬಸ್ಗಳನ್ನು ಹೊರತುಪಡಿಸಿ ಉಳಿದ 100 ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಶಕ್ತಿ ಯೋಜನೆ ಒತ್ತಡವನ್ನು ನಿವಾರಿಸಲು 100 ಸಾಮಾನ್ಯ ಬಸ್ಗಳಿಗೂ ಹಸಿರು ನಿಶಾನೆ ತೋರಿದ್ದಾರೆ.
ಈ ಬಸ್ ನ ವಿಶೇಷತೆಗಳು ಈ ರೀತಿಯಾಗಿವೆ:
- ನಾನ್ ಎಸಿ ಸ್ಲೀಪರ್ ಬಸ್ ಇದಾಗಿದೆ. ಅತ್ಯಂತ ಆಕರ್ಷಕ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಹೊಂದಿದೆ.
2. ಪಲ್ಲಕ್ಕಿ ಸ್ಲೀಪರ್ ಬಸ್ 28 ಸೀಟ್ ಸಾಮರ್ಥ್ಯ ಹೊಂದಿದೆ. - ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ನಿರ್ಮಾಣವಾಗಿದ್ದು, ಪ್ರತಿ ಬಸ್ ಬೆಲೆ 45 ಲಕ್ಷ ರೂಪಾಯಿ ಇರಲಿದೆ
- 40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ ಸಂಚರಿಸಲಿವೆ.
- ಉಳಿದ 10 ಬಸ್‌ಗಳು ಬೆಂಗಳೂರಿನಿಂದ ಹೊರರಾಜ್ಯಗಳಿಗೆ ಸಂಚರಿಸಲಿವೆ.
- ಸೀಟ್ ನಂಬರ್ ಮೇಲೆ ಎಲ್ಇಡಿ ಅಳವಡಿಕೆ
- ಓದಲು ಉತ್ತಮ ಬೆಳಕಿನ ಎಲ್ಇಡಿ ಲೈಟ್ ಅಳವಡಿಕೆ
- ಬಸ್ನಲ್ಲಿ ಅಡಿಯೋ ಸ್ವೀಕರ್ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
- ಡಿಜಿಟಲ್ ಗಡಿಯಾರ, ಹಾಗೆ ಎಲ್ಇಡಿ ಪ್ಲೋರ್.
- ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
- ಈ ಬಸ್ ಸೇವೆಯು ಇಂದಿನಿಂದಲೇ ಆರಂಭವಾಗಲಿದೆ
- ನಾನ್ ಎಸಿ ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್ ಮಾಡಿರಲಿಲ್ಲ.
- ಸದ್ಯ ಪಲ್ಲಕ್ಕಿ ಎಂಬ ಬ್ರ್ಯಾಂಡ್ ನೇಮ್ ಇಡಲಾಗಿದೆ. 14. ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.