ಸಮಗ್ರ ನ್ಯೂಸ್ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ದೇವಸ್ಥಾನದ ಹಿತರಕ್ಷಣಾ ವೇದಿಕೆ ಸಕ್ರಿಯ ಸದಸ್ಯ ಎಂದು ಗುರುತಿಸಿಕೊಂಡಿದ್ದ ಪ್ರಶಾಂತ್ ಭಟ್ ಮಾಣಿಲನನ್ನು ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಳಿಕ ಕಾರವಾರ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದಿದ್ದಾರೆ. ನ್ಯಾಯಾಲಯದ ಆದೇಶ ಪಡೆದು ಶಿರಸಿಯ ಖಾಸಗಿ ಲಾಡ್ಜ್ ಗೆ ಕರೆದೊಯ್ದು ಮಹಜರು ನಡೆಸಿದ್ದಾಗಿ ತಿಳಿದುಬಂದಿದೆ.
ಆರೋಪಿ ಪ್ರಶಾಂತ್ ಭಟ್ ಮಾಣಿಲ ತನ್ನ ಬಣ್ಣದ ಮಾತುಗಳಿಂದ ವಿಶ್ವಾಸ ಗಳಿಸಿ, ನಿನಗೆ ಆರ್ಕೆಸ್ಟ್ರಾ ದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ವಿವಾಹಿತ ಮಹಿಳೆಯೊಬ್ಬರನ್ನು ಶಿರಸಿಯ ಖಾಸಗಿ ಲಾಡ್ಜ್ ಗೆ ಕರೆಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಮಹಿಳೆಯನ್ನೇ ಬ್ಲಾಕ್ ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಬಗ್ಗೆ ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದ.ಕ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿರುವ ಆರೋಪಿ ಪ್ರಶಾಂತ್ ಭಟ್ ಮಾಣಿಲ ವಿರುದ್ಧ ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭಿಸಿದೆ.