Ad Widget .

ಯಾವುದೇ ‌ಕಾರಣಕ್ಕೆ ಹೊಸ ಮದ್ಯದಂಗಡಿಗೆ ಲೈಸೆನ್ಸ್ ಕೊಡಲ್ಲ – ಸಿಎಂ

ಸಮಗ್ರ ನ್ಯೂಸ್: ಉಚಿತ ಯೋಜನೆಗಳಿಂದಾಗಿ ಸಾವಿರಾರು ಕೋಟಿ ವ್ಯಯವಾಗುತ್ತಿದೆ. ಈ ನಷ್ಟ ಸರಿದೂಗಿಸಲು, ಗ್ರಾಮ ಪಂಚಾಯತ್‌ಗೆ ಒಂದರಂತೆ ಬಾರ್‌ ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ಯಾವ ಕಾರಣಕ್ಕೂ ತೆರೆಯೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Ad Widget . Ad Widget .

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದಕ್ಕೆ ಮಹಿಳೆಯರ ವಿರೋಧವಿದೆ. ಹೀಗಾಗಿ ಸರ್ಕಾರಕ್ಕೆ ಹಣಕಾಸಿನ ಕೊರತೆ ಇದ್ದರೂ ಕೂಡಾ ಮದ್ಯದಂಗಡಿಗಳು ತೆರೆಯುವುದಕ್ಕೆ ಹೊಸ ಲೈಸೆನ್ಸ್‌ ನೀಡಲು ನಾನು ಅನುಮತಿ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ.

Ad Widget . Ad Widget .

ರಾಜ್ಯ ಸರ್ಕಾರ ಗ್ರಾಮ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲಿದೆ ಎನ್ನುವ ವಿಚಾರ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ವಿಪಕ್ಷಗಳು ಕಟುವಾಗಿ ಇದನ್ನು ಟೀಕಿಸಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಕುಡುಕರ ತೋಟ ಮಾಡಲು ಹೊರಟಿದೆ ಎಂದು ಟೀಕಿಸಿದ್ದವು. ಬಾರ್, ವೈನ್ ಶಾಪ್ ತೆರೆಯುವ ವಿಚಾರ ತಿಳಿಯುತ್ತಿದ್ದಂತೆ ಮಹಿಳೆಯರು ಬೀದಿಗಿಳಿದು ಪ್ರತಿಭಟನೆಯನ್ನೂ ನಡೆಸಿದ್ದು, ಈ ಮುಖಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದರಿಂದ ಎಲ್ಲದಕ್ಕೂ ತೆರೆ ಎಳೆದಂತಾಗಿದೆ.

Leave a Comment

Your email address will not be published. Required fields are marked *