ಸಮಗ್ರ ನ್ಯೂಸ್: ಕಾಂಗ್ರೆಸ್ ಗ್ಯಾರಂಟಿಯ ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಬಳಸಿಕೊಳ್ಳುತ್ತಿರುವುದಂತು ನಿಜ, ಅದರಂತೆ ಇಂದು ಫ್ರೀ ಬಸ್ ನಲ್ಲಿ ಕೋತಿಯೊಂದು ಪ್ರಯಾಣ ಆರಂಭಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.
ಅಂದಹಾಗೇ ಈ ದೃಶ್ಯ ಕಂಡುಬಂದಿದ್ದು ಹಾವೇರಿ ಜಿಲ್ಲೆಯಲ್ಲಿ. ಹಾವೇರಿಯಿಂದ – ಹಿರೇಕೆರೂರ ವರೆಗೂ ಮಂಗನ ಪ್ರಯಾಣ ಮುಂದುವರೆದಿತ್ತು. ಅಂದರೆ ಸುಮಾರು 30 ಕಿ.ಮೀಟರ್ ದೂರದಷ್ಟು ಕೋತಿ ಟ್ರಾವಲಿಂಗ್ ಮಾಡಿದೆ. https://www.instagram.com/reel/CyDN8jSreyb/?igshid=MzRlODBiNWFlZA==
ಜನರಿಂದ ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ಭಯವಿಲ್ಲದೆ ಕೋತಿ ಪ್ರಯಾಣ ಮಾಡಿದ್ದು, ಬಸ್ ನಲ್ಲಿ ಮಂಗನ ಪ್ರಯಾಣದ ದೃಶ್ಯಕಂಡು ಜನರು ಫುಲ್ ಖುಷ್ ಆಗಿದ್ದಾರೆ. ಶಾಲಾ ಮಕ್ಕಳು ಕೋತಿಗೆ ಬಸ್ ನಲ್ಲಿ ಸೀಟು ಬಿಟ್ಟುಕೊಟ್ಟು ಬಾಳೆ ಹಣ್ಣು, ಬಿಸ್ಕೇಟ್ ನೀಡಿ ಮಂಗನ ಪ್ರಯಾಣಕ್ಕೆ ಜನ ಸಹಕಾರಿಸಿದ್ದಾರೆ. ಮಂಗ ಅಂತು ಅರಾಮದಾಯಕವಾಗಿ ಹೊರಗಿನ ವಾತಾವರಣ ನೋಡುತ್ತಾ ಸಂಭ್ರಮದಿಂದ ಪ್ರಯಾಣಿಸಿದೆ.