ಸಮಗ್ರ ನ್ಯೂಸ್: 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಡುತ್ತಿವೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡವು ಕಳೆದ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಇದೆಲ್ಲದರ ನಡುವೆ 2023ರ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಬಿಸಿಸಿಐ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಮೊದಲ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯವನ್ನು ವೀಕ್ಷಿಸಲು ಮೈದಾನದ ಕಾಲು ಭಾಗವೂ ಭರ್ತಿಯಾಗದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಈ ರೀತಿ ಐಸಿಸಿ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಹಿರಿಕಿರಿಯ ಕ್ರಿಕೆಟಿಗರು ಹಾಗೂ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಆಯೋಜಕರನ್ನು ಟ್ರೋಲ್ ಮಾಡಿದ್ದಾರೆ. ಈ ಮೊದಲು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದ ಟಿಕೆಟ್‌ಗಳು ಸಂಪೂರ್ಣವಾಗಿ ಸೋಲ್ಡೌಟ್ ಆಗಿವೆ ಎಂದೆಲ್ಲಾ ವರದಿಯಾಗಿತ್ತು. ಆದರೆ ವಾಸ್ತವ ಇದಕ್ಕೆ ವ್ಯತಿರಿಕ್ತ ಎನ್ನುವಂತಿದೆ.
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ಲೇ ವ್ಯಾಟ್, ಪ್ರೇಕ್ಷಕರು ಎಲ್ಲಿ ಹೋದ್ರು ಎಂದು ಎಕ್ಸ್(ಟ್ವೀಟ್) ಮಾಡಿ ಅಚ್ಚರಿ ಹೊರಹಾಕಿದ್ದಾರೆ.
ರಾಜ್ಮಾ ಚಾವಲ್ ಎನ್ನುವ ನೆಟ್ಟಿಗರೊಬ್ಬರು, ಖಾಲಿ ಸ್ಟ್ಯಾಂಡ್‌ಗಳ ಮುಂದೆ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯ. ಈ ಪಂದ್ಯದ ಟಿಕೆಟ್‌ಗಳೆಲ್ಲವೂ ಸೋಲ್ಡೌಟ್ ಆಗಿದ್ದವು ಅಲ್ಲವೇ? ನಿಜಕ್ಕೂ ಬೇಸರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿಯೊಬ್ಬ, 22 ಆಟಗಾರರು, ಎರಡು ಅಂಪೈರ್ ಮೈದಾನದಲ್ಲಿ ಹಾಗೂ 17 ಪ್ರೇಕ್ಷಕರ ಸಮ್ಮುಖದಲ್ಲಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಮೊದಲ ಎಸೆತ ಆರಂಭ ಎಂದು ಟ್ರೋಲ್ ಮಾಡಿದ್ದಾರೆ.
Karnataka MLA Raju Kage expressed displeasure on congress ministers sat
ಸರ್ಕಾರದ ವಿರುದ್ಧ ಮತ್ತೆ ತಿರುಗಿಬಿದ್ದ ಶಾಸಕ ರಾಜು ಕಾಗೆ! ಸಚಿವರ ಕಾರ್ಯವೈಖರಿ ಬಗ್ಗೆ ಕಿಡಿ
Boy Friend Helps Friend To Get Married With His Girl Friend Police Arrest 2 Accused In Kidnap Case In Ramanagara gvd
ಅಬ್ಬಬ್ಬಾ… ಇದೆಂಥಾ ಫ್ರೆಂಡ್‌ಶಿಪ್: ಪ್ರತಿಷ್ಠೆಗಾಗಿ ಪ್ರೇಯಸಿಯನ್ನೇ ಗಿಫ್ಟ್ ಕೊಟ್ಟ ಗೆಳೆಯ!
Popular Categories
NEWS
SPORTS
VIDEO
ENTERTAINMENT
KARNATAKA DISTRICT
LIFE
SELECT LANGUAGE
Malayalam
English
Kannada
Telugu
Tamil
Bangla
Hindi
Follow us on:
ABOUT US
TERMS OF USE
PRIVACY POLICY
COMPLAINT REDRESSAL – WEBSITE
COMPLAINT REDRESSAL – TV
COMPLIANCE REPORT DIGITAL
INVESTORS
© Copyright 2023 Asianet News Media & Entertainment Private Limited | Aಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ಲೇ ವ್ಯಾಟ್, ಪ್ರೇಕ್ಷಕರು ಎಲ್ಲಿ ಹೋದ್ರು ಎಂದು ಎಕ್ಸ್(ಟ್ವೀಟ್) ಮಾಡಿ ಅಚ್ಚರಿ ಹೊರಹಾಕಿದ್ದಾರೆ.
ರಾಜ್ಮಾ ಚಾವಲ್ ಎನ್ನುವ ನೆಟ್ಟಿಗರೊಬ್ಬರು, ಖಾಲಿ ಸ್ಟ್ಯಾಂಡ್‌ಗಳ ಮುಂದೆ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯ. ಈ ಪಂದ್ಯದ ಟಿಕೆಟ್‌ಗಳೆಲ್ಲವೂ ಸೋಲ್ಡೌಟ್ ಆಗಿದ್ದವು ಅಲ್ಲವೇ? ನಿಜಕ್ಕೂ ಬೇಸರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿಯೊಬ್ಬ, 22 ಆಟಗಾರರು, ಎರಡು ಅಂಪೈರ್ ಮೈದಾನದಲ್ಲಿ ಹಾಗೂ 17 ಪ್ರೇಕ್ಷಕರ ಸಮ್ಮುಖದಲ್ಲಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಮೊದಲ ಎಸೆತ ಆರಂಭ ಎಂದು ಟ್ರೋಲ್ ಮಾಡಿದ್ದಾರೆ.