Ad Widget .

ಸೌಜನ್ಯ ಹತ್ಯಾ ಪ್ರಕರಣ| ನ್ಯಾಯಕ್ಕೆ ಆಗ್ರಹಿಸಿ‌ ಮಡಿಕೇರಿಯಲ್ಲಿ ವಾಯ್ಸ್ ಆಫ್ ಯೂತ್ ಯೂನಿಯನ್’ ವತಿಯಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಧರ್ಮಸ್ಥಳ ವ್ಯಾಪ್ತಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ `ಸೌಜನ್ಯ’ ಹತ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಾಯ್ಸ್ ಆಫ್ ಯೂತ್ ಯೂನಿಯನ್ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

Ad Widget . Ad Widget .

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಯೂನಿಯನ್‍ನ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ, ಸೌಜನ್ಯ ಹತ್ಯಾ ಪ್ರಕರಣದ ಮರು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

Ad Widget . Ad Widget .

ಈ ಸಂದರ್ಭ ಯೂನಿಯನ್ ಅಧ್ಯಕ್ಷ ಕೆ.ಆರ್.ದಿನೇಶ್ ಮಾತನಾಡಿ, ಸೌಜನ್ಯಳನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವ ಪ್ರಕರಣಕ್ಕೆ 11 ವರ್ಷಗಳಾದರೂ ಸೂಕ್ತ ನ್ಯಾಯ ದೊರಕದೆ ಇರುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗದೇ ಇರುವುದು ಖಂಡನೀಯ ಎಂದರು.
ಈ ಸಂಬಂಧ ಸಂತೋಷ್ ರಾವ್ ನನ್ನು ಬಂಧಿಸಲಾಗಿತ್ತಾದರು, ಸಿಬಿಐ ನ್ಯಾಯಾಲಯ ಆತನನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದೆ.

ಈ ನಿಟ್ಟಿನಲ್ಲಿ ಪ್ರಕರಣದ ನೈಜ ಆರೋಪಿಗಳನ್ನು ಕಂಡು ಹಿಡಿಯಲು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಯೂನಿಯನ್ ಕಾರ್ಯದರ್ಶಿ ಆರ್.ಎಂ.ದರ್ಶಿನಿ ಮಾತನಾಡಿ, ಅಮಾಯಕ ಹೆಣ್ಣು ಮಗಳ ಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲೇಬೇಕು. ಅತ್ಯಾಚಾರಿ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸುವ ಮೂಲಕ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.

ಯೂನಿಯನ್ ಉಪಾಧ್ಯಕ್ಷ ಡಿ.ಎಂ.ಪ್ರತಾಪ್, ಸದಸ್ಯರಾದ ಶಶಿಧರ್, ರಕ್ಷಿತ್, ಜಗತ್, ಝೈನೋಲ್ ಅಬಿದ್, ಸಿಂಚನ, ಪ್ರಿಯ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು. ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರಿಗೆ ಹಸ್ತಾಂತರಿಸಲಾಯಿತು.

Leave a Comment

Your email address will not be published. Required fields are marked *