ಸಮಗ್ರ ಉದ್ಯೋಗ: Indian Armyಗೆ ಸೇರಬೇಕು ಎಂದು ಅದೆಷ್ಟೋ ವರ್ಷಗಳಿಂದ ಸತತ ಪ್ರಯತ್ನ ಪಡ್ತಾ ಇದ್ದೀರಾ? ನಿಮಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ ನೋಡಿ. ಒಟ್ಟು 37 ಮೆಸೆಂಜರ್, ಕುಕ್, ಸಫಾಯಿವಾಲಾ ಹುದ್ದೆಗಳನ್ನು ಭರ್ತಿ ಮಾಡಲಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ತಡಮಾಡದೇ ಬೇಗ ಅರ್ಜಿ ಹಾಕಿ. ಸೆಪ್ಟೆಂಬರ್ 30, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗವಿದು, ಮಿಸ್ ಮಾಡ್ಲೇಬೇಡಿ. ಇನ್ನಷ್ಟು ವಿವರಗಳನ್ನು ತಿಳಿಯೋಣ ಬನ್ನಿ.
Job Details:
ಸ್ಟೆನೋಗ್ರಾಫರ್ ಗ್ರೇಡ್-II- 1
ಲೋವರ್ ಡಿವಿಶನ್ ಕ್ಲರ್ಕ್ (LDC)- 1
ಫೈಯರ್ ಮ್ಯಾನ್-2
ಮೆಸೆಂಜರ್-15
ರೇಂಜ್ ಚೌಕಿದಾರ್-2
ಮಜ್ದೂರ್-3
ಗಾರ್ಡೆನೆರ್-2
ಸಫಾಯಿವಾಲಾ-3
ಕುಕ್-5
CSBO ಗ್ರೇಡ್-II- 3
Age:
ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 30, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷಕ್ಕಿಂತ ಹೆಚ್ಚಾಗಿರಬಾರದು.
Education:
ಸ್ಟೆನೋಗ್ರಾಫರ್ ಗ್ರೇಡ್-II- 12ನೇ ತರಗತಿ
ಲೋವರ್ ಡಿವಿಶನ್ ಕ್ಲರ್ಕ್ (LDC)- 12ನೇ ತರಗತಿ
ಫೈಯರ್ ಮ್ಯಾನ್- 10ನೇ ತರಗತಿ
ಮೆಸೆಂಜರ್- 10ನೇ ತರಗತಿ
ರೇಂಜ್ ಚೌಕಿದಾರ್- 10ನೇ ತರಗತಿ
ಮಜ್ದೂರ್- 10ನೇ ತರಗತಿ
ಗಾರ್ಡೆನೆರ್- 10ನೇ ತರಗತಿ
ಸಫಾಯಿವಾಲಾ- 10ನೇ ತರಗತಿ
ಕುಕ್- 10ನೇ ತರಗತಿ
CSBO ಗ್ರೇಡ್-II- 10ನೇ ತರಗತಿ
Salary:
ವೇತನ:
ಸ್ಟೆನೋಗ್ರಾಫರ್ ಗ್ರೇಡ್-II- ಮಾಸಿಕ ₹ 25,000-81,000
ಲೋವರ್ ಡಿವಿಶನ್ ಕ್ಲರ್ಕ್ (LDC)- ಮಾಸಿಕ ₹ 19,900-63,200
ಫೈಯರ್ ಮ್ಯಾನ್- ಮಾಸಿಕ ₹ 19,900- 63,200
ಮೆಸೆಂಜರ್- ಮಾಸಿಕ ₹ 18,000-56,900
ರೇಂಜ್ ಚೌಕಿದಾರ್-ಮಾಸಿಕ ₹ 18,000-56,900
ಮಜ್ದೂರ್-ಮಾಸಿಕ ₹ 18,000-56,900
ಗಾರ್ಡೆನೆರ್-ಮಾಸಿಕ ₹ 18,000-56,900
ಸಫಾಯಿವಾಲಾ- ಮಾಸಿಕ ₹ 18,000-56,900
ಕುಕ್- ಮಾಸಿಕ ₹ 18,000-56,900
CSBO ಗ್ರೇಡ್-II- ಮಾಸಿಕ ₹ 21,700-69,100
Selection:
ಲಿಖಿತ ಪರೀಕ್ಷೆ
ಪ್ರಾಕ್ಟಿಕಲ್/ ಟ್ರೇಡ್/ ಫಿಜಿಕಲ್ & ಸ್ಕಿಲ್ ಟೆಸ್ಟ್
ದಾಖಲಾತಿ ಪರಿಶೀಲನೆ
ಮೆಡಿಕಲ್ ಟೆಸ್ಟ್
ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳವಾಗಿರಬಹುದು.
ಅಪ್ಲೇ ಮಾಡೋದು ಹೀಗೆ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.
ಕೇಂದ್ರೀಯ ನೇಮಕಾತಿ ಏಜೆನ್ಸಿ
HQ PH & HP (I) ಉಪ ಪ್ರದೇಶ
ಅಂಬಾಲಾ ಕಂಟೋನ್ಮೆಂಟ್
ಜಿಲ್ಲೆ-ಅಂಬಾಲಾ
ರಾಜ್ಯ-ಹರಿಯಾಣ
PIN-13301
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 30, 2023 (ನಾಳೆ). ತಡಮಾಡಬೇಡಿ, ಅಪ್ಲೇ ಮಾಡಿ ಜಾಬ್ ಗಿಟ್ಟಿಸಿಕೊಳ್ಳಿ.