ಸಮಗ್ರ ನ್ಯೂಸ್: ಬಾಯಿ ಬಳಿ ಮೂಳೆ ಮುರಿತಕ್ಕೊಳಗಾದ ಒಂದು ತಿಂಗಳ ಕರುವಿಗೆ ಸುಳ್ಯ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್ ಪ್ರಭು ಮತ್ತು ಡಾ. ನಾಗರಾಜ್ Rtd ಕೇರಳ ವೆಟ್ನರಿ ಕೌನ್ಸಿಲ್ ಪಶು ವೈದ್ಯಕೀಯ ಪರಿಷತ್ ನ ಕನ್ಸಲ್ಟೆಂಟ್ ಆಗಿದ್ದವರು ಶಸ್ತ್ರಚಿಕಿತ್ಸೆ ಮಾಡಿಸಿ ಯಶಸ್ವಿಯಾಗಿದ್ದಾರೆ.
ಸುಳ್ಯದ, ಐವರ್ನಾಡು ಗ್ರಾಮದ ಕೃಷ್ಣಪ್ಪ ಕುಕ್ಕುಡೇಲು ಎಂಬವವರ ಒಂದು ತಿಂಗಳ ಕರು ಕಮರಿಗೆ ಬಿದ್ದು ಬಾಯಿ ಭಾಗದ ದವಡೆ ಮೂಳೆ ಮುರಿತಕ್ಕೊಳಕ್ಕಾಗಿತ್ತು. ಇದನ್ನು ಪರೀಕ್ಷಿಸಿದ ಸುಳ್ಯದ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್ ಪ್ರಭು ಮತ್ತು ಡಾ. ನಾಗರಾಜ್ ಮನುಷ್ಯರಿಗೆ ಮಾಡುವ ರೀತಿಯಲ್ಲಿ ಶಸ್ತ್ರಚಿಕಿತ್ಸಾ ಮಾಡಿ ಬೋನ್ ಪಿನ್ನಿಂಗ್ ಅಳವಡಿಸಿದ್ದಾರೆ. ಇದೊಂದು ಅಪರೂಪದ ಘಟನೆ ಸುಳ್ಯ ಪಶುಪಾಲನಾ ಇಲಾಖೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿದೆ.
ಡಾಕ್ಟರ್ ನಾಗರಾಜ್ ಅವರು ಕೇರಳ ಪಶು ವೈದ್ಯಕೀಯ ಪರಿಷತ್ತಿನ ನಿವೃತ್ತ ನಿಬಂಧಕರು. ಪ್ರಸ್ತುತ ತುರ್ತು ಪಶು ಚಿಕಿತ್ಸಾ ವ್ಯವಸ್ಥೆಯ ಪಶು ವೈದ್ಯರಾಗಿ ನಿವೃತ್ತಿ ನಂತರ ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.