ಸಮಗ್ರ ನ್ಯೂಸ್: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿದೆ. ಎರಡು ಚಟುವಟಿಕೆಗಳು ಕೂಡ ಮನುಷ್ಯನಿಗೆ ಜ್ಞಾನವನ್ನು ತಂದುಕೊಡುತ್ತದೆ. ಓದುವಿಕೆ ಪುಸ್ತಕದ ಜ್ಞಾನವನ್ನು ಕೊಟ್ಟರೆ, ಪ್ರವಾಸ ಅನುಭವದ ಜ್ಞಾನವನ್ನು ಕೊಡುತ್ತದೆ. ಹಾಗಾಗಿ ಪ್ರವಾಸ ಎಂಬುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು.
ವಿಶ್ವಸಂಸ್ಥೆ ಸೆಪ್ಟೆಂಬರ್ 27, 1980ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಯನ್ನು ಅಂಗೀಕರಿಸಿತು. ಅಂದಿನ ಜಗತ್ತಿನಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಪ್ರವಾಸ ಎಂಬುದು ಜ್ಞಾನವನ್ನು ನೀಡುವುದರ ಜೊತೆಗೆ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಕೆಲಸದ ಸುಸ್ತು ಮರೆಯಾಗಿಸಲು ಇಂದು ವೀಕೆಂಡ್ ಪ್ರವಾಸಗಳು ಸಾಮಾನ್ಯವಾಗಿವೆ.