ಸಮಗ್ರ ನ್ಯೂಸ್: ಕಾವೇರಿ ಜಲವಿವಾದ ಕುರಿತಂತೆ ರಾಜ್ಯಾದ್ಯಂತ ಪ್ರತಿಭಟನೆಗಳ ಕಾವು ಜೋರಾಗುತ್ತಿದ್ದು ಇದೀಗ ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ಸೆ.29ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಕರೆಕೊಟ್ಟಿದ್ದಾರೆ.
ನಾವು ಅಖಂಡ ಕರ್ನಾಟಕ ಬಂದ್ ಕರೆದಿರುವ ಉದ್ದೇಶ ಕಾವೇರಿ ಕಿಚ್ಚು ದೆಹಲಿಗೆ ಗೊತ್ತಾಗಬೇಕು. ರಾಜ್ಯ ಸರ್ಕಾರಕ್ಕೆ ಗೊತ್ತಾಗಬೇಕು. ನಾವು ಹುಡುಗಾಟಕ್ಕಾಗಿ ಬಂದ್ ಮಾಡುತ್ತಿಲ್ಲ. ಸೆಪ್ಟೆಂಬರ್.29ರ ಶುಕ್ರವಾರದಂದು ಅಖಂಡ ಕರ್ನಾಟಕ ಬಂದ್ ಮಾಡೋದಾಗಿ ಅಧಿಕೃತವಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕಾವೇರಿ ವಿಚಾರವಾಗಿ ನಾವು ಎಂದಿಗೂ ಹೆದರೋದಿಲ್ಲ. ನಾಳೆ ಬೆಂಗಳೂರಲ್ಲಿ ಕಾವೇರಿ ವಿವಾದದ ಬಗ್ಗೆ ಬಂದ್ ಮಾಡೋದು ಬೇಡ. ಸೆ.29 ಬೇಡ ಏನೂ ಬೇಡ ಸೆ.28ಕ್ಕೆ ಮಾಡೋಣ ಅಂತ ನಾಳೆ ಬಂದ್ ನಡೆಸುತ್ತಿರೋರನ್ನು ಕೇಳಿದ್ವಿ. ಆದರೇ ಅವರು ಅದಕ್ಕೆ ಒಪ್ಪಿಲ್ಲ. ಹೀಗಾಗಿ ನಾವು ಸೆ.29ರಂದು ಅಖಂಡ ಕರ್ನಾಟಕ ಬಂದ್ ಮಾಡೋದಾಗಿ ತಿಳಿಸಿದರು.
ಸೆ.29ರ ಅಖಂಡ ಕರ್ನಾಟಕ ಬಂದ್ ಗೆ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಬಂದ್ ಗೆ ರಾಜ್ಯಾಧ್ಯಂತ 1,000ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದಾವೆ. ಕರವೇ ಶಿವರಾಮೇಗೌಡ, ಪ್ರವೀಣ್ ಶೆಟ್ಟಿಯವರು ಸೇರಿದಂತೆ ಕನ್ನಡಪರ ಸಂಘಟನೆಗಳು ಬೆಂಬಲ ಕೂಡ ಇದೆ.
ನಾವು ಕರ್ನಾಟಕ ಬಂದ್ ಅಂತ ಹೇಳಿ, ರಾಮನಗರ ಬಂದ್, ಕನಕಪುರ ಬಂದ್ ಅಂದರೆ ಏನು ಅಂತ ಕೇಳುತ್ತಿದ್ದಾರೆ. ನೀವು ಬಂದ್ ಅಂದ್ರೇ ಕಾವೇರಿ ವಿಷಯವೇ ಅಂತ ಅನೇಕರು ಕೇಳುತ್ತಿದ್ದಾರೆ. ಹೀಗಾಗಿ ನಾವು ಕಾವೇರಿ ನದಿ ನೀರಿಗಾಗಿ ಸೆ.29ರಂದು ಅಖಂಡ ಕರ್ನಾಟಕ ಬಂದ್ ಮಾಡೋದಾಗಿ ಘೋಷಣೆ ಮಾಡಿದರು.