ಸಮಗ್ರ ನ್ಯೂಸ್: ಹೊಸಮಠದಲ್ಲಿ ದ್ವಿತೀಯ ವರುಷದ ಶ್ರೀ ಗಣೇಶೋತ್ಸವವು ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಅವರ ಅಧ್ಯಕ್ಷತೆಯಲ್ಲಿ ಸರ್ವಧರ್ಮದ ಪಾಲ್ಗೊಳ್ಳುವಿಕೆಯೊಂದಿಗೆ ಬಹಳ ವಿಜ್ರಂಭನೆಯಿಂದ ಜರುಗಿತು.
ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಧಾರ್ಮಿಕ ಸಭೆ ಹಾಗೂ ರವಿ ರಾಮಕುಂಜ ಸಾರಾಥ್ಯಲ್ಲಿ ಕಾಮಿಡಿ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸರ್ವಧರ್ಮದ ಮುಖಂಡರು ಭಾಗವಹಿಸಿ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದರು. ಧಾರ್ಮಿಕ ಪ್ರವಚನವನ್ನು ಲಕ್ಷ್ಮೀಶ ಗಬಲಡ್ಕ ಹಾಗೂ ಸಭಿಕರನ್ನು ನೋಡುವಾಗ ನೈಜ ಭಾರತದ ಅನಾವರಣವಾಗಿದೆ ಎಂದು ಸಂದೇಶ ಸಾರಿದರು.
ಶ್ರೀ ಗಣೇಶೋತ್ಸವವು ಪೂಜಾ ವಿಧಿ-ವಿಧಾನಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಸಂಜೆ 4ಗಂಟೆಗೆ ಗುಂಡ್ಯ ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ಮೂಲಕ ಸಂಪನ್ನಗೊಂಡಿತು.
ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಕುಟ್ರುಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಸುಮನ, ಧಾರ್ಮಿಕ ಉಪನ್ಯಾಸಕ ಲಕ್ಷ್ಮೀಶ ಗಬಲಡ್ಕ, ಡಾ||ರಘು ಬೆಳ್ಳಿಪ್ಪಾಡಿ, ಬಾಲಕೃಷ್ಣ ಬಳ್ಳೇರಿ, ವಿಜಯ ಕುಮಾರ್ ರೈ, ಅಬ್ದುಲ್ ಕರೀಮ್, ಪ್ರವೀಣ್ ಕೆಡೆಂಜಿ, ಜನಾರ್ಧನ ಪಣೆಮಜಲು, ನಾರಾಯಣ ಕೊಲ್ಲಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿತಾ ಸುಧೀರ್ ಕಾರ್ಯಕ್ರಮ ನಿರೂಪಿಸಿ, ಮಿಥುನ್ ವಂದಿಸಿ, ಆನಂದಕುಮಾರ್ ಕಜೆ ನೆರವೇರಿಸಿದರು.