ಸಮಗ್ರ ನ್ಯೂಸ್: ಅರ್ನ ಕ್ರಿಯೇಷನ್ಸ್ ಸಂಸ್ಥೆಯ ‘ಅಂಬರ ಮರ್ಲೆರ್’ ಎಂಬ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರತಿ ಭಾನುವಾರ ಪ್ರಸಾರವಾಗಲಿದೆ ಎಂದು ನಿರ್ಮಾಪಕ ಹಾಗೂ ಪ್ರಧಾನ ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರತಿ ಭಾನುವಾರ ಮಧ್ಯಾಹ್ನ 1.30ರಿಂದ 2 ಗಂಟೆಯವರೆಗೆ ಧಾರಾವಾಹಿ ಪ್ರಸಾರವಾಗಲಿದೆ. ನಟರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುಂದರ್ ರೈ ಮಂದಾರ, ಉಮೇಶ್ ಮಿಜಾರ್, ಅರುಣ್ ಚಂದ್ರ ಬಿ.ಸಿ. ರೋಡ್, ರಾಜೇಶ್ ಮೀಯಪದವು, ರಂಜನ್ ಬೋಳೂರು, ಸೋಮನಾಥ ಶೆಟ್ಟಿ ಮಂಗಲ್ಪಾಡಿ, ರವಿ ರಾಮಕುಂಜ, ಸುನಿಲ್ ನೆಲ್ಲಿಗುಡ್ಡೆ, ರೂಪ ವರ್ಕಾಡಿ, ನಮಿತಾ ಕಿರಣ್, ಪ್ರತ್ವಿನ್ ಪೊಳಲಿ ಸೇರಿದಂತೆ 75ಕ್ಕೂ ಹೆಚ್ಚು ತುಳು ರಂಗಭೂಮಿ, ಸಿನಿಮಾ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ’ ಎಂದರು.
ಪುತ್ತೂರು, ಮಂಗಳೂರು, ಕೇರಳದ ಕೆಲ ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, 24 ಕಂತುಗಳು ಸಿದ್ಧವಾಗಿವೆ. ಪ್ರಸಾದನದಲ್ಲಿ ಪ್ರಸಾದ್ ಕೊಯಿಲ, ಕಲೆ ಹಾಗೂ ನಿರ್ಮಾಣದಲ್ಲಿ ವಿಜಯ್ ಮಯ್ಯ, ಸಹ ನಿರ್ದೇಶನದಲ್ಲಿ ರವಿ ಎಂ.ಎಸ್. ವರ್ಕಾಡಿ, ಸಾಹಿತ್ಯ ಹಾಗೂ ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಪ್ರಜ್ವಲ್ ಆಚಾರ್ಯ, ಪವನ್ ಕುಮಾರ್, ನವೀನ್, ಪ್ರಚಾರ ಕಲೆ ಗಣೇಶ್ ಕೆ., ಸಹ ಛಾಯಾಗ್ರಹಣ ಸಂಜಯ್ ನಾರಾಯಣ, ಅಶೋಕ್ ಬೇಕೂರ್, ಹಿನ್ನೆಲೆ ಸಂಗೀತದಲ್ಲಿ ಗುರು ಬಾಯಾರ್, ಮುಖ್ಯ ಛಾಯಾಗ್ರಹಣ ಹಾಗೂ ಸಂಕಲನದಲ್ಲಿ ಧನು ರೈ ಪುತ್ತೂರು ನೆರವು ನೀಡಿದ್ದಾರೆ ಎಂದರು. ಪ್ರಮುಖರಾದ ರಂಜನ್ ಬೋಳೂರು, ಅರುಣ್ ಚಂದ್ರ ಬಿ.ಸಿ. ರೋಡ್, ಧನು ರೈ ಪುತ್ತೂರು ಇದ್ದರು.