ಸಮಗ್ರ ನ್ಯೂಸ್: ಡೀಲ್ ಪ್ರಕರಣದಲ್ಲಿ ಆರೋಪಿಯಾಗಿ ಸಿಸಿಬಿ ವಶದಲ್ಲಿರು ಚೈತ್ರಾ ಕುಂದಾಪುರಳನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ಸೆ.12ರಂದು ಬಂಧಿತಳಾಗಿದ್ದ ಚೈತ್ರಾ ಕುಂದಾಪುರಳನ್ನು ಮರುದಿನ ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸೆ.15ರಂದು ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ನಿಮಿಷದಲ್ಲಿ ಆಕೆ ವಾಷ್ ರೂಮ್‌ನಲ್ಲಿ ಬಾಯಿಯಲ್ಲಿ ನೊರೆಯೊಂದಿಗೆ ಬಿದ್ದುಕೊಂಡಿದ್ದಳು. ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಇದು ಆತ್ಮಹತ್ಯೆ ಯತ್ನ ಎಂದೂ, ಬಳಿಕ ಅಪಸ್ಮಾರ ಸಮಸ್ಯೆ ಎಂದು ಸುದ್ದಿಯಾಗಿತ್ತು. ಆದರೆ ಪರೀಕ್ಷೆ ಮಾಡಿದಾಗ ಯಾವುದೇ ಅನಾರೋಗ್ಯವಾಗಲಿ, ವಿಷ ಸೇವನೆಯಾಗಲೀ, ಅಪಸ್ಮಾರದ ಲಕ್ಷಣಗಳಾಗಲೀ ಕಾಣಲಿಲ್ಲ. ಎಲ್ಲ ವೈದ್ಯಕೀಯ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಈ ವೇಳೆ ಆಕೆ ಸಿಸಿಬಿ ಕಚೇರಿಯಲ್ಲಿ ಸಾಬೂನಿನ ನೊರೆಯನ್ನು ಮುಖಕ್ಕೆ ಹಚ್ಚಿ ನಾಟಕ ಮಾಡಿದ್ದಳು ಎಂಬ ಅಂಶ ಬಯಲಾಯಿತು.
ಬಳಿಕ ಆಕೆಯನ್ನು ಸೆ. 18ರಂದು ಆಸ್ಪತ್ರೆಯಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದೆ. ಬಳಿಕ ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಈ ವೇಳೆ ಸಾಂತ್ವನ ಕೇಂದ್ರಕ್ಕೆ ಹೋಗುವ ಸಂದರ್ಭ ಚೈತ್ರಾ ಕುಂದಾಪುರ ‘ಸಾಕ್ಷಾತ್ಕಾರದ ದಾರಿಯಲ್ಲಿ’ ಎಂಬ ಪುಸ್ತಕದೊಂದಿಗೆ ತೆರಳಿದ್ದಾಳೆ. ಇನ್ನೂ ಮಂಗಳವಾರದಿಂದ ಆಕೆಯ ವಿಚಾರಣೆ ಮತ್ತೆ ಶುರುವಾಗಲಿದೆ.