ಸಮಗ್ರ ನ್ಯೂಸ್: ನಿನ್ನೆ(ಸೆ.15) ಪ್ರಸಾರ ಆದ ಪವರ್ ಟಿವಿಯ ‘ಕ್ಷಮಿಸು ಸೌಜನ್ಯ -3’ ಸಂದರ್ಭವನ್ನು ಕೇವಲ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಹೋರಾಟಗಾರರನ್ನು ರಾಕೇಶ್ ಶೆಟ್ಟಿ ಟೀಕಿಸಲು ಬಳಸಿಕೊಂಡಿದ್ದಾರೆ. ಸೆಟಲೈಟ್ ಟಿವಿಯೊಂದು ಇತಿಹಾಸದಲ್ಲಿಯೇ, ಅದೂ ಟಿವಿಯೊಂದರ ಮಾಲೀಕರು ವೈಯಕ್ತಿಕ ನಿಂದನೆಗೆ ಇಳಿದದ್ದು ಇದೇ ಮೊದಲು. ಸೌಜನ್ಯ -3 ಮೊದಲು ಪ್ರತಿಭಟನೆಗಾರರನ್ನು ಟೆರರಿಸ್ಟ್ ಅಂದಿದೆ. ಮೊದಲಿಗೆ, ಶಾಂತಿಯುತವಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಬಳಸುವ ಪ್ರತಿಭಟನೆ ಮಾಡುವವರನ್ನು ಟೆರರಿಸ್ಟ್ ಟೆರರಿಸ್ಟ್ ಗಳಿಗೆ ಹೋಲಿಸಿತ್ತು ಟಿವಿ ಚಾನೆಲ್.
ಏಕ ಮುಖ ಅಭಿಪ್ರಾಯಗಳಿಂದ ಬಂದಿದ್ದ ಚಾನೆಲ್ ಕೇವಲ ಧರ್ಮಸ್ಥಳದ ಪರವಾಗಿ ಮಾತಾಡಿತ್ತು. ಕಳೆದ 11 ವರ್ಷಗಳಿಂದ ಸೌಜನ್ಯನ ಸಂತ್ರಸ್ತ ಅಮ್ಮನನ್ನು ಕೂಡಾ ಅನುಮಾನಿಸಿ ಮಾತಾಡಿದ ನಿನ್ನೆಯ ಪ್ರೋಗ್ರಾಮ್ ನಲ್ಲಿ ತಾನು ಮಾಡಿದ್ದೇ ತನಿಖೆ, ಎನ್ನುತ್ತಾ ಮಹೇಶ್ ಶೆಟ್ಟರಿಗೆ ಏಕವಚನದಲ್ಲಿ ನಿಂದನೆ ಮಾಡಿತ್ತು. ಬೈಗುಳ ಅತಿಯಾದಾಗ ಮಾತು ಜಾರಿದೆ. ಇಡೀ ಶೆಟ್ಟಿ ಸಮುದಾಯಕ್ಕೆ ತೀವ್ರ ಅಪಮಾನ ಆಗಿದೆ. ಶೆಟ್ಟರ ಸರ್ ನೇಮ್ ಅನ್ನು ಕೆಟ್ಟ ಪದಕ್ಕೆ ಹೋಲಿಸಿದ್ದು, ಈ ಕುರಿತು ಭಾರಿ ಖಂಡನೆ ವ್ಯಕ್ತವಾಗಿದೆ.
ನಿನ್ನೆಯ ಪ್ರೋಗ್ರಾಮಿನಲ್ಲಿ ಭಾಗಿಯಾದವರ ಉಳಿದವರ ಮಾತಿನ ಬಗ್ಗೆ ಆಶ್ಚರ್ಯ ಆಗಲಿಲ್ಲ. ಆದರೆ, ಪ್ರವೀಣ್ ವಾಲ್ಕೆಯಂತಹ ನಿಜವಾದ ಹೋರಾಟಗಾರ ಮತ್ತು ಹಿರಿಯರನ್ನು ಕೂಡ ಕರೆದು ತಂದು ತಾವು ಜೀವಮಾನದಲ್ಲಿ ಗಳಿಸಿದ ಒಳ್ಳೆಯ ಹೆಸರನ್ನು ಹಾಳುಮಾಡುವ ಕಾರ್ಯಕ್ರಮದ ಮೇಲೆ ಪ್ರಜ್ಞಾವಂತರಿಗೆ ಬೇಸರ ಮೂಡಿಸಿದ್ದು ನಿಜ. ಯಾವುದೊ ಅಪ್ರಸ್ತುತ ಡಾಕ್ಯುಮೆಂಟ್ ಮುಂದಿಟ್ಟು, ‘ಇದು ಸಾಕ್ಷಿ, ಇದೇ ಫೈನಲ್, ಇನ್ನೇನು ಬೇಕು ಎನ್ನುವ ಈ ಕಾರ್ಯಕ್ರಮದ ನೋಡಿದ ಎಂಥವರಿಗಾದರೂ ಅದರ ಉದ್ದೇಶ ಅರ್ಥ ಆಗೋದರಲ್ಲಿ ಅನುಮಾನವೇ ಇಲ್ಲ.
ಜಗತ್ತಿನ ಯಾವುದೇ ಕ್ಷೇತ್ರದಲ್ಲಿ ಯಾವುದೇ ಕ್ಷೇತ್ರಕ್ಕೆ ಹೋಗಲಿ ತನ್ನತನವನ್ನು ಬಿಟ್ಟು ಕೊಡದೆ ತಮ್ಮದೇ ಆದ ಛಾಪು ಮೂಡಿಸಿರುವ, ಕಲೆ – ಸಂಸ್ಕೃತಿ ಸಂಸ್ಕಾರ, ದೈವ ದೇವರುಗಳನ್ನು ಸದಾ ಪೂಜಿಸುವ, ಧ್ಯಾನಿಸುವ ಶೆಟ್ಟಿ ಸಮುದಾಯವನ್ನು ಈ ಥರ ನಿಷ್ಕೃಷ್ಟವಾಗಿ ಕಂಡದ್ದು ಇತಿಹಾಸದಲ್ಲೇ ಇಲ್ಲ.
ತಾನು ಒಬ್ಬ ತನಿಖಾ ಪತ್ರಿಕೋದ್ಯಮಿ, ನನ್ನದು ಇಂಟರ್ನ್ಯಾಷನಲ್ ಲೆವೆಲ್, ನಮ್ಮದು ಸೆಟಲೈಟ್ ಟಿವಿ ಎನ್ನುವ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯ ಈ ಹೇಳಿಕೆಯ ಬಗ್ಗೆ ಜಾತ್ಯತೀತವಾಗಿ ಮತ್ತು ಧರ್ಮಾತೀತವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.