Ad Widget .

ಏಷ್ಯಾಕಪ್ ಕ್ರಿಕೆಟ್| ಲಂಕಾದಿಂದ ಪಾಕ್ ದಹನ

ಸಮಗ್ರ ನ್ಯೂಸ್: ಕೊಲಂಬೊದಲ್ಲಿ ಗುರುವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದ ಕೊನೆಯ ಎಸೆತದಲ್ಲಿ ವಿಶ್ವದ ಅಗ್ರ ಕ್ರಮಾಂಕದ ತಂಡವಾದ ಪಾಕಿಸ್ತಾನವನ್ನು 2 ವಿಕೆಟ್ ಅಂತರದಿಂದ ಸೋಲಿಸಿದ ಶ್ರೀಲಂಕಾ ತಂಡ ಫೈನಲ್ ತಲುಪಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ 87 ಎಸೆತಗಳಲ್ಲಿ 91 ರನ್ ಸಾಧಿಸಿದ ಕುಶಾಲ್ ಮೆಂಡಿಸ್ ವಿಜಯದ ರೂವಾರಿ ಎನಿಸಿದರು. ಇವರ ಜತೆಗೆ ಸದೀರ ಸಮರ ವಿಕ್ರಮ ಮತ್ತು ಚರಿತ್ ಅಸಲಂಕಾ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಲು ಗಣನೀಯ ಕೊಡುಗೆ ನೀಡಿದರು. 252 ರನ್‍ಗಳ ಗುರಿ ಬೆನ್ನಟ್ಟಿದ ಲಂಕಾ ತಂಡಕ್ಕೆ ಕುಶಾಲ್- ಸಮರವೀರ (48) ಜೋಡಿ ಶತಕದ ಜತೆಯಾಟ ವರದಾನವಾಯಿತು.

Ad Widget . Ad Widget . Ad Widget .

ವರುಣದ ಮುನಿಸಿನಿಂದಾಗಿ ಈ ಪಂದ್ಯವನ್ನು 45 ಓವರ್‍ಗಳಿಗೆ ಸೀಮಿತಗೊಳಿಸಲಾಯಿತು. ಅಂತಿಮವಾಗಿ ಪಂದ್ಯ 42 ಓವರ್ ಗಳಿಗೆ ನಿರ್ಬಂಧಿಸಲ್ಪಟ್ಟಿತು. ಮೊಹ್ಮದ್ ರಿಜ್ವಾನ್- ಇಫ್ತಿಕರ್ ಅಹ್ಮದ್ ಜೋಡಿಯ 108 ರನ್‍ಗಳ ಜತೆಯಾಟದಿಂದಾಗಿ ಪಾಕಿಸ್ತಾನ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು. ಅದರೆ ಅಸಲಂಕಾ ಅವರ ಅಮೋಘ ಪ್ರದರ್ಶನದಿಂದ ಕೊನೆ ಎಸೆತದಲ್ಲಿ ಜಯ ಶ್ರೀಲಂಕಾ ಪಾಲಾಯಿತು. ಭಾರತ ಈಗಾಗಲೇ ಟೂರ್ನಿಯ ಫೈನಲ್ ತಲುಪಿದೆ.

Leave a Comment

Your email address will not be published. Required fields are marked *