ಸಮಗ್ರ ನ್ಯೂಸ್: ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ವಾಷ್ಠರ್ ಭಕ್ತಿ ಗಾನಮಂಜರಿ ಕಾರ್ಯಕ್ರಮವು ಜರುಗಿತು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ಈ ಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಸಮಾಜಸೇವಕ ಮಂಜು ಮೇಸ್ತ್ರಿ ಬಳ್ಳಾರಿ ಉದ್ಘಾಟಿಸಿದರು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಮತ್ತು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಟರ್ ರವರು ವಾಷ್ಠರ್ ಭಕ್ತಿ ಗಾನ ಮಂಜರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕ್ರೀಯಾಶೀಲ ಕಾರ್ಯಕರ್ತರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕುಮಾರೀಶ್ ವಿಶ್ವ ವಿದ್ಯಾಲಯದ ಅಕ್ಕಂದಿರಾದ ಬಿ ಕೆ ಶಕುಂತಲಾ ಮತ್ತು ಮುಖ್ಯ ಅತಿಥಿಯಾಗಿ ಕೆ.ಗಾಯಿತ್ರಿ ಅವರು ಭಾಗವಹಿಸಿದ್ದರು. ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರು ಧನ್ಯವಾದ ಸಲ್ಲಿಸಿ ಅಶ್ವಿಜ್ ಅತ್ರೇಯ ಪ್ರಾರ್ಥನೆ ಹಾಡಿದರು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಭಕ್ತಿ ಗಾನಮಂಜರಿ ಕಾರ್ಯಕ್ರಮದಲ್ಲಿ ಗಾಯಕರಾದ ತನ್ಮಯ್ ಸೋಮಯಾಗಿ, ಪುಷ್ಪಾವತಿ ಆರ್ ಡಿ ಎಡಮಂಗಲ, ಸುರೇಶ್ ಕುಮಾರ್ ಚಾರ್ವಾಕ, ಸನತ್ ಕೆ ಬೆಳ್ಳಾರೆ, ಪೂಜಾಶ್ರೀ ಬಳ್ಳಡ್ಕ, ಮಾಸ್ಟರ್ ಚೆನ್ನಕೇಶವ ಸುಳ್ಯ, ಪಲ್ಲವಿಶ್ರೀ ಆಲೆಟ್ಟಿ ಸುಳ್ಯ, ಪೆರುಮಾಳ್ ಲಕ್ಷ್ಮಣ್ ಐವರ್ನಾಡು, ಐಶಾನಿ ಸುಳ್ಯ, ಸಂದೀಪ್ ಸುಳ್ಯ, ರವಿ ಪಾಂಬಾರು, ಬಬಿತಾ ಎಸ್ ಕದಂಬರ್, ಯಜೀಶ್ ಎಸ್ ಕದಂಬರ್, ಪ್ರದ್ಯುಮ್ನ ಎಡಮಂಗಲ, ರಾಜೇಂದ್ರ ಕರಿಕೆ, ಸಾಯಿ ಪ್ರಶಾಂತ ಇನ್ನಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಪ್ರಶಂಸನಾ ಪತ್ರ ಮತ್ತು ಶ್ರೀಕೃಷ್ಣನ ಭಾವಚಿತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕುಮಾರಿಸ್ ಆಶ್ರಮದ ವತಿಯಿಂದ ಸರ್ವರಿಗೂ ರಕ್ಷಾಬಂಧನದ ರಾಖಿ ಕಟ್ಟಿ ಶುಭ ಹಾರೈಸಿದರು.