ಸಮಗ್ರ ನ್ಯೂಸ್: ದಿನಗಳೆದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲರೂ ತಮ್ಮ ಸ್ವಂತ ವಾಹನಗಳಲ್ಲೇ ಓಡಾಡಬೇಕು ಎಂದು ಬಯಸುವ ಈ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಒಂದು ವಾಹನವಾದರು ಇದ್ದೇ ಇರುತ್ತದೆ.
ಈ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ (Traffic) ಕೂಡ ಹೆಚ್ಚಾಗುತ್ತಿದ್ದು, ವಾಹನ ಸಂಖ್ಯೆಗಳ ಏರಿಕೆಯು ನಗರಗಳಲ್ಲಿ ಪ್ರಯಾಣ ದಟ್ಟಣೆಯಿಂದ ಹೆಚ್ಚಾಗುತ್ತಿದೆ. ವೇಗವಾಗಿ ಚಾಲನೆ ಮಾಡುವುದರಿಂದ ಆಕ್ಸಿಡೆಂಟ್ ಗಳು ಕೂಡ ಹೆಚ್ಚುತ್ತಿದೆ. ಈ ಕಾರಣಕ್ಕೆ ಈಗ ವಾಹನಗಳ ವಿಚಾರಕ್ಕೆ ಸರ್ಕಾರ ಈಗ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ.
ರಾಜ್ಯದಲ್ಲಿ ಇನ್ನುಮುಂದೆ ವಾಹನ ಸವಾರಿ ಮಾಡುವ ಎಲ್ಲರೂ ಕೂಡ RTO ನಿಗಮಗಳನ್ನು ಪಾಲಿಸಿಯೇ ಗಾಡಿಗಳನ್ನು ಓಡಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡಿದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ (Deriving Licence) ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಈ ನಿಯಮಗಳು ಹೇಗಿದೆ ಎಂದರೆ, ಯಾವುದೇ ಜಾಗರೂಕತೆ ತೆಗೆದುಕೊಳ್ಳದೆ ವಾಹನ ಓಡಿಸುವುದು, ವಾಹನ ಓಡಿಸುವಾಗ ಫೋನ್ ನಲ್ಲಿ ಮಾತನಾಡುವುದು, ಹೆಲ್ಮೆಟ್ ಹಾಕಿಕೊಳ್ಳದೆ ವಾಹನ ಓಡಿಸುವುದು, ಮದ್ಯಪಾನ ಮಾಡಿ ವಾಹನ ಚಾಲಾಯಿಸಿದರೆ ಮೇಲೆ RTO ಇಲಾಖೆ ದಂಡ ವಿಧಿಸುತ್ತದೆ. ಅಷ್ಟಲ್ಲದೆ ಡಿಎಲ್ ಅನ್ನು ಕ್ಯಾನ್ಸಲ್ ಮಾಡುವ ಹೊಸ ಕ್ರಮಗಳನ್ನು ಜಾರಿಗೆ ತರುವ ನಿರ್ಧಾರ ತೆಗೆದುಕೊಂಡಿದೆ ಸರ್ಕಾರ.
ಈ ನಿಯಮ ಮುಖ್ಯವಾಗಿ ಜಾರಿಗೆ ಬಂದಿರುವುದು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bengaluru Express way)ನಲ್ಲಿ ಈ ಹೊಸ ನಿಯಮಗಳನ್ನು ಜಾರಿಗೆ ತಂದ ಬಳಿಕ ಇಲ್ಲಿ ಆಕ್ಸಿಡೆಂಟ್ ಆಗುವುದು ಕಡಿಮೆ ಆಗಿದೆ.
ಇಲ್ಲಿ ನಿಯಮಗಳು ಉತ್ತಮವಾಗಿ ರಿಸಲ್ಟ್ ಕೊಟ್ಟಿರುವ ಕಾರಣ ಇಡೀ ರಾಜ್ಯದಲ್ಲಿ ಈ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ವೇಗವಾಗಿ ಡ್ರೈವ್ ಮಾಡುವುದು, ತಪ್ಪಾದ ಕಡೆಯಲ್ಲಿ ಡ್ರೈವಿಂಗ್ ಮಾಡುವುದು, ಸಿಗ್ನಲ್ ಜಂಪ್ ಮಾಡುವುದು, ಅಥವಾ ಇನ್ಯಾವುದೇ ನಿಯಮ ಉಲ್ಲಂಘನೆ ಮಾಡುವುದನ್ನು ಕ್ಯಾಮೆರಾ (Camera)ಗಳು ಸೆರೆ ಹಿಡಿಯುತ್ತದೆ. ಅದನ್ನು ಪೊಲೀಸರು ಗಮನಿಸಿ ಅವರ ಮೇಲೆ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
Driver to appoint for all the car and all vehicle salary will be paid