ಸಮಗ್ರ ನ್ಯೂಸ್: ಚಿಕ್ಕಮಗಳೂರು ಆರ್.ಟಿ.ಓ.ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಮಹಿಳಾ ಆರ್.ಟಿ.ಓ. ಅಧಿಕಾರಿ ಹಾಗೂ ಅಟೆಂಡರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಸೆ.4 ರಂದು ನಡೆದಿದೆ.
ಬೈಕ್ ಶಾಪ್ ಓನರ್ ರಾಜ್ಯಾದ್ಯಂತ ಸಂಚರಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದ. ಆದರೆ ಆರ್.ಟಿ.ಓ. ಅಧಿಕಾರಿ ರೆಂಟೆಡ್ ಬೈಕಿಗೆ ಪರವಾನಗಿ ಮಾಡಿಕೊಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.1 ಬೈಕಿಗೆ 500 ರಂತೆ 8 ಬೈಕಿಗೆ 4000 ಸರ್ಕಾರಿ ಫೀಸ್ ಕಟ್ಟಿದ್ದ.
ಆರ್.ಟಿ.ಓ. ಅಟೆಂಡರ್ ಮೂಲಕ ಡೀಲ್ ನಡೆಸುತ್ತಿದ್ದ ಮಹಿಳಾ ಅಧಿಕಾರಿ ನಂತರ ಫೈಲ್ ಪೆಂಡಿಂಗ್ ಇಟ್ಟು ಬೈಕಿಗೆ 1000ದಂತೆ 8 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಅಡೆಂಡರ್ ಲತಾ 3000 ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದಾರೆ. ಈ ಘಟನೆಗೆ ಸಂಬಂಧಿಸಿ ಅಟೆಂಡರ್ ಲತಾ ಹಾಗೂ ಆರ್.ಟಿ.ಓ. ಮಧುರಾ ವಿರುದ್ಧ ಪ್ರಕರಣ ದಾಖಲಾಗಿದೆ.