ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೆ. 1ರಂದು ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ಇಸ್ರೋ ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗೃಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭ ಶ್ರೀ ದೇವಳದ ಆಡಳಿತ ಮಂಡಳಿಯು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಲಾಯಿತು. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆ. 31ರಂದು ರಾತ್ರಿ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ದೇವಳಕ್ಕೆ ಭೇಟಿ ನೀಡಿದ ಅವರು ಮಧ್ಯಾಹ್ನ ಮಹಾಪೂಜೆ ವೀಕ್ಷಿಸಿ, ಬಳಿಕ ಇಸ್ರೋದಿಂದ ಸೂರ್ಯ ಗ್ರಹದ ಅಧ್ಯಾಯನಕ್ಕಾಗಿ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗ್ರಹವು ಯಾವುದೇ ತೊಂದರೆಗಳಿಲ್ಲದೆ ಉಡಾವಣೆಯಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂಧ್ಯಾ ವಿ. ಶರ್ಮ ಅವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಸನ್ಮಾನಿಸಿ ಅವರಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಅಲ್ಲದೆ ಚಂದ್ರಯಾನ 3ರ ಯಶಸ್ಸಿಗಾಗಿ ದೇವಳದಿಂದ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.