ಸಮಗ್ರ ನ್ಯೂಸ್: ಕಲಾವಿದರು ಮುಂದೆ ಬಂದು ಅವಕಾಶವನ್ನು ಬೆಳೆಸಿಕೊಳ್ಳಬೇಕು. ಅವಕಾಶ ಎನ್ನುವುದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇರುತ್ತದೆ. ತಮ್ಮ ಪ್ರತಿಭೆಯ ತೋರಿಸಿಕೊಂಡಾಗ ಒಂದಷ್ಟು ಜನರಿಗೆ ಪರಿಚಯವಾಗಲು ಸಾಧ್ಯ ಹಾಗೆಯೇ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದರೆ ಹದಿಯರೆಯ ವಿದ್ಯಾರ್ಥಿಗಳು ಪ್ರೇಮ ವೈಕಾಲ್ಯಕ್ಕೆ ಹಿಡಿತದಲ್ಲಿರಬೇಕು ಎಂದು ತೇಜಕುಮಾರ್ ಬಡ್ಡಡ್ಕ ಹೇಳಿದರು.
ಇವರು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಲವ್ ಮೈನಸ್ 18 ಕಿರು ಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
ಸುಳ್ಯದಲ್ಲಿ ಕಲಾವಿದರು ಹೆಚ್ಚಿನ ಟಿವಿ ಚಾನೆಲ್ ಗಳಲ್ಲಿ ಮುಂದೆ ಬರುತ್ತಿದ್ದಾರೆ ಎನ್ನುವುದು ಸಂತಸದ ಸುದ್ದಿ ಆಗಿದೆ. ಬೇರೆ-ಬೇರೆ ದೇಶಗಳಲ್ಲಿ ಆಗುವ ಎಲ್ಲಾ ಸಿನಿಮಾಗಳನ್ನು ನಾವು ವೀಕ್ಷಿಸಲು ಹೊರದೇಶಕ್ಕೆ ಹೋಗುತ್ತೇವೆ. ಅಂತಹುದರ ನಡುವೆ ನಮ್ಮ ಕರಾವಳಿಯ ಸ್ಥಳಗಳಲ್ಲಿಯೇ ಚಿತ್ರೀಕರಣ ಆದ ಚಿತ್ರವು ಹದಿಯರೆಯ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ. ಇನ್ನಷ್ಟು ಸಿನಿಮಾ ತರಲಿ ಎಂದು ತಂಡಕ್ಕೆ ರಂಗನಿರ್ಧೇಶಕ ಕೃಷ್ಣಪ್ಪ ಬಿಂಬಿಲ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಚಿದಾನಂದ ಪರಪ್ಪ, ಯಶ್ ಫೋಟೋಗ್ರಫಿ ಛಾಯಾಗ್ರಾಹಕರು, ಹಿರಿಯ ಸಾಹಿತಿ ಭೀಮರಾವ್ ವಾಷ್ಠರ್ ಹಾಗೂ ಕಲಾವಿದರು ಉಪಸ್ಥಿತರಿದ್ದರು. ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.