ಸಮಗ್ರ ನ್ಯೂಸ್: ವಾಹನ ಚಾಲನೆಯ ವೇಳೆಯಲ್ಲಿ ಮೊಬೈಲ್ ಬಳಕೆ ಕಾನೂನು ರೀತಿ ನಿಷಿದ್ಧ. ಹೀಗೆ ಬಳಕೆ ಮಾಡೋದು ಅಪರಾಧ. ಒಂದು ವೇಳೆ ವಾಹನ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತ ಸಿಕ್ಕಿಬಿದ್ದರೇ ಫೈನ್ ಫಿಕ್ಸ್. ಆದ್ರೇ ಹೀಗೆ ಮಾಡೋದು ಸರಿಯಲ್ಲ. ತಪ್ಪು ಕೂಡ.
ಬೈಕ್ ಸವಾರಿ ಮಾಡುವಾಗ, ಕಾರು ಚಾಲನೆ ಮಾಡುವಾಗ ಅಥವಾ ರಸ್ತೆಯಲ್ಲಿ ನಡೆಯುವಾಗ ಮೊಬೈಲ್ ಫೋನ್ ಬಳಸುವುದು ಮಾರಣಾಂತಿಕವೆಂದು ಸಾಬೀತುಪಡಿಸುತ್ತದೆ. ಬೈಕ್ ಸವಾರಿ ಮಾಡುವಾಗ ಫೋನ್ ಬಳಸುವುದರಿಂದ ಉಂಟಾಗುವ ವಿನಾಶಕಾರಿ ಪರಿಣಾಮಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ವೀಡಿಯೊದಲ್ಲಿ ಬೈಕ್ ಸವಾರನೊಬ್ಬ ಫೋನ್ನಲ್ಲಿ ಮಾತನಾಡುತ್ತ ರಸ್ತೆ ಕ್ರಾಸ್ ಮಾಡೋದಕ್ಕೆ ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ಸವಾರನನ್ನು ಒಂದಷ್ಟು ದೂರ ಟ್ರಕ್ ಎಳೆದೊಯ್ಯಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ವೀಡಿಯೊದಲ್ಲಿ ಸಮಯ ಮತ್ತು ಸ್ಥಳ ತಿಳಿದಿಲ್ಲ. ವೀಡಿಯೊದಲ್ಲಿ ತೋರಿಸಿರುವಂತೆ ಟ್ರಕ್ ಬೈಕ್ ಸವಾರನನ್ನು ಸ್ವಲ್ಪ ದೂರ ಎಳೆದುಕೊಂಡು ಹೋಯಿತು. ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ನೀವು ರೋಡ್ ಕ್ರಾಸ್ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತ ಹೋದ್ರೆ ಏನ್ ಆಗಲಿದೆ ಎನ್ನುವ ಭಯಾನಕತೆಯನ್ನು ವೈರಲ್ ವೀಡಿಯೋ ಬಿಚ್ಚಿಡುತ್ತಿದೆ. ಈ ವೀಡಿಯೋ ನೋಡಿದಂತ ನೆಟ್ಟಿಗರು ಹುಷಾರಾಗಿ ಬೈಕ್ ಓಡಿಸಿ ಅಂತ ಹೇಳಿದ್ದಾರೆ.