ಸಮಗ್ರ ನ್ಯೂಸ್: ಚಂದ್ರಯಾನದ ಕುರಿತು ಬ್ರಿಟನ್‌ನ ನ್ಯೂಸ್ ಆಂಕರ್ ಒಬ್ರು ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಾಹ್ಯಾಕಾಶದಲ್ಲಿ ಸಾಧನೆ ಮಾಡ್ತಿರುವ, ಚಂದ್ರನಲ್ಲಿಗೆ ತಲುಪುವ ಸಾಮರ್ಥ್ಯ ಇರೋ ದೇಶಕ್ಕೆ ವಿದೇಶಿ ನೆರವಿನ ಅಗತ್ಯ ಇರೋದಿಲ್ಲ. ಹೀಗಾಗಿ 2016 ರಿಂದ 2021ರವರೆಗೆ ಬ್ರಿಟನ್ ಭಾರತಕ್ಕೆ ನೀಡಿರುವ ಸುಮಾರು 2,388 ಕೋಟಿ ರೂಪಾಯಿ ನೆರವನ್ನ ಭಾರತ ವಾಪಸ್ ಕೊಡ್ಬೇಕು ಅಂತ ಜಿಬಿ ನ್ಯೂಸ್ ಅನ್ನೋ ನ್ಯೂಸ್ ಚಾನೆಲ್‌ನ ಆಂಕರ್ ಪ್ಯಾಟ್ರಿಕ್ ಕ್ರಿಸ್ಟ್ಸ್ ಹೇಳಿದಾರೆ.
ಈ ಹೇಳಿಕೆಗೆ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತ ಮಾಡಿರೋ ಸಾಧನೆಯನ್ನ ನಿಮ್ಮ ಕೈಯಲಿ ಮಾಡೋಕೆ ಆಗಲ್ಲ ಅಂದ್ರೆ ಬಿಡಿ. ಒಪ್ಪಂದದ ಹೆಸರಲ್ಲಿ ಬ್ರಿಟನ್ ಭಾರತಕ್ಕೆ ಕೊಟ್ಟಿರೋ ಹಣವನ್ನ ವಾಪಾಸ್ ಕೇಳುವ ಮೊದಲು ನಮ್ಮ ದೇಶ ಭಾರತದಿಂದ ಕೊಳ್ಳೆ ಹೊಡೆದಿರುವ ಹಣವನ್ನ ಮೊದಲು ನಮಗೆ ಕೊಡಿ. ಒಂದಲ್ಲ ಎರಡಲ್ಲ 45 ಟ್ರಿಲಿಯನ್ ಡಾಲರ್ ಅಂದ್ರೆ ಸುಮಾರು 3,690 ಲಕ್ಷ ಕೋಟಿ ರೂಪಾಯಿಯನ್ನ ಬ್ರಿಟನ್ ಭಾರತದಿಂದ ದೋಚಿದೆ. ಮೊದಲು ಅದನ್ನ ವಾಪಸ್ ಕೊಡಿ ಅಂತ X ಬಳಕೆದಾರರೊಬ್ಬರು ಕೇಳಿದ್ದಾರೆ. ಅಲ್ದೆ ನಿಮ್ಮ ರಾಣಿ ಕಿರೀಟದಲ್ಲಿ ಹೊತ್ತು ಮೆರೆಯುತ್ತಿರೋ ಕೋಹಿನೂರ್ ವಜ್ರವನ್ನ ವಾಪಾಸ್ ಮಾಡಿ ಅಂತ ಆಗ್ರಹಿಸಿದ್ದಾರೆ.
ಇದಷ್ಟೇ ಅಲ್ಲ ಪ್ಯಾಟ್ರಿಕ್ಸ್ ಅವ್ರ ಈ ಹೇಳಿಕೆಗೆ ಪಕ್ಕದ ಪಾಕಿಸ್ತಾನದವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʻನಮಗೆ ಪರಸ್ಪರ ಸೆಲಬ್ರೇಟ್ ಮಾಡೋದು ಗೊತ್ತು. ಪಾಕಿಸ್ತಾನದವರಾಗಿ ನಾವೇ ಸೆಲೆಬ್ರೇಟ್ ಮಾಡ್ತಾ ಇದ್ದೀವಿ. ಈ ಬ್ರಿಟಿಷ್ ನ್ಯೂಸ್ ನಿರೂಪಕರಿಗೆ ಬರ್ನಾಲ್ ಕೊಡಿʼ ಅಂತ ಪಾಕಿಸ್ತಾನದ ಕ್ರಿಕೆಟ್ ಅನಾಲಿಸ್ಟ್ ಮೊಹ್ಸಿನ್ ಅಲಿ ಅನ್ನೋರು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಲಿ ಜೊತೆಯಲ್ಲಿ ಧ್ವನಿ ಗೂಡಿಸಿರುವ ಇತರ ಪಾಕ್ ಬಳಕೆದಾರರು ʻಆ ಬ್ರಿಟಿಷ್ ಆಂಕರ್‌ಗೆ ಸರಿಯಾದ ರಿಪ್ಲೈ ಕೊಟ್ಟಿದ್ದೀರಿʼ ಅಂತ ಹೇಳಿದ್ದಾರೆ. ಈ ಮೂಲಕ ಚಂದ್ರಯಾನವನ್ನ ಅರಗಿಸಿಕೊಳ್ಳದ ಬ್ರಿಟಿಷ್ ನ್ಯೂಸ್ ಆಂಕರ್‌ಗೆ ಭಾರತೀಯರು ಪಾಕಿಸ್ತಾನದವರು ಎಲ್ರೂ ಒಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.