ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಉಪ್ಪಿನಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯ ದಡಂತಮಲೆ ಬಟ್ಟಾಡಿ ಕಪಿಲ ನದಿ ಪಕ್ಕದಲ್ಲಿ ನಾಲ್ಕು ವರ್ಷ ಪ್ರಾಯದ ಕಡವೆಯನ್ನು ಆರೋಪಿಗಳು ಮಂಗಳವಾರ ರಾತ್ರಿ ಬೇಟೆಯಾಡಿದ್ದರು.
ಅರಣ್ಯ ಇಲಾಖೆಯ ಸಿಬಂದಿ ರಾತ್ರಿ ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುದೇಶ್ ಪಟ್ರಮೆ, ಪುನೀತ್, ಕೋಟ್ಯಪ್ಪ ಗೌಡ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದಾನೆ. ಎಸಿಎಫ್ ಸುಬ್ಬಯ್ಯ ನಾಯ್ಕ್ ನೇತೃತ್ವದಲ್ಲಿ ಉಪ್ಪಿನಂಗಡಿ ಆರ್‌ಎಫ್‌ಒ ಜಯಪ್ರಕಾಶ್ ಕೆ ಮಾರ್ಗದರ್ಶನದಲ್ಲಿ, ಡಿ ಆರ್ ಎಫ್‌ಒ ಸಿ.ಎನ್. ಲೋಕೇಶ್ ಅಶೋಕ್ ,ರಾವುತಪ್ಪ, ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.