ನವದೆಹಲಿ : ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಮಿಷನ್ ಪೂರ್ಣಗೊಂಡಿದ್ದು, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.
ಸಧ್ಯ ಯಶಸ್ವಿ ಚಂದ್ರಯಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚರ್ಚೆ ಶುರುವಾಗಿದ್ದು, ಲ್ಯಾಂಡಿಂಗ್ ವೇಳೆ ವಿಕ್ರಂ ಲ್ಯಾಂಡರ್ ಅಕ್ಷರಶಃ ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದೆ ಎನ್ನಲಾಗ್ತಿದೆ.
ಈ ಮೂಲಕ ಇದೆಲ್ಲಾ ಗೋವಿಂದನ ಕೃಪೆಯೆಂದು ಭಕ್ತರು ಹೇಳುತ್ತಿದ್ದಾರೆ.
ಅಂದ್ಹಾಗೆ, ಚಂದ್ರಯಾನ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ನೀಡಿತ್ತು. ಚಂದ್ರಯಾನದ ಮಾದರಿಯನ್ನ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿಟ್ಟು ಪೂಜೆ ಸಲ್ಲಿಸಿದ್ದರು. ಸಧ್ಯ ಲ್ಯಾಂಡಿಂಗ್ ವೇಳೆ ವಿಕ್ರಂ ಲ್ಯಾಂಡರ್ ತಿರುಪತಿ ತಿಮ್ಮಪ್ಪನ ಕಿರೀಟಕ್ಕೂ ಸಾಮ್ಯತೆ ಇತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.