ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದು ನಾಗಪಂಚಮಿಯ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಲಾಯಿತು.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ISRO ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ. ಈ ಮೂಲಕ ತಾಯಿ ಭಾರತೀಯ ಹೆಸರು ಪ್ರಪಂಚದಲ್ಲೇ ಅಗ್ರಗಣ್ಯವಾಗಲಿ ಎಂದು ಪಂಚಮಿಯ ದಿನವಾದ ಇಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ (ಕಾರ್ತೀಕ ಪೂಜೆ) ನಡೆಸಿ ಮತ್ತು ಶ್ರೀ ಪುರದೊಡೆಯ ಕುಕ್ಕೆ ಕುಕ್ಕೆ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರೊಂದಿಗೆ ಸೇರಿ ಪ್ರಾರ್ಥಿಸಲಾಯಿತು.
ಇಂದು ನಾಡಿನೆಲ್ಲೆಡೆ ನಾಗರ ಪಂಚಮಿಯ ಸಂಭ್ರಮ ಸಡಗರ ಮನೆ ಮಾಡಿದೆ. ಹಾಗೆಯೇ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೇವರಿಗೆ ವಿಶೇಷ ಪೂಜೆ ಮಾಡಲಾಗಿದೆ. ನಾಗನ ವಿಗ್ರಹಕ್ಕೆ ಹಾಲು, ಸೀಯಾಳ ಅಭಿಷೇಕ ನೆರವೇರಿಸಲು ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಕುಕ್ಕೆಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.