ಸಮಗ್ರ ನ್ಯೂಸ್:ಕಡಬ ತಾಲೂಕಿನ ಗೃಹರಕ್ಷಕ ದಳ ಘಟಕ ಕಛೇರಿಗೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯ ಕ್ರಮ ಆ.20 ರಂದು ನಡೆಯಿತು.
ಈ ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮತ್ತು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಿ ಎಂದು ಶುಭ ಹಾರೈಸಿದರು. ಇನ್ನು ಮುಂದೆ ಗೃಹರಕ್ಷಕರಿಗೆ ವಾರದ ಕವಾಯತು ಮತ್ತು ವಿಶ್ರಾಂತಿಗೆ ಸೂರು ಕಲ್ಪಿಸಿದ ಕರ್ನಾಟಕ ಬ್ಯಾಂಕಿಗೆ ಧನ್ಯವಾದ ಸಮರ್ಪಿಸಿದರು.
ಕಡಬ ಪೇಟೆಯ ದಾಮ್ರೋಡಿ ಎಂಬಲ್ಲಿ 5 ಸೆನ್ಸ್ ಜಾಗ 20 ವರ್ಷಗಳ ಹಿಂದೆ ಸರಕಾರದಿಂದ ಮಂಜೂರಾಗಿದ್ದು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ರಾದ ಡಾ| ಮುರಲಿ ಮೋಹನ ಚೂಂತಾರು ಅವರ ವಿಶೇಷ ಮುತುವರ್ಜಿಯಿಂದಾಗಿ ಕರ್ನಾಟಕ ಬ್ಯಾಂಕ್ ತನ್ನ ಸಾರ್ವಜನಿಕ ಬದ್ಧತಾ ನಿಧಿಯಿಂದ 10 ಲಕ್ಷಗಳನ್ನು ನೂತನ ಕಛೇರಿ ಕಟ್ಟಡಕ್ಕೆ ಅನುಧಾನ ಮಂಜೂರು ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯಾತಿ ಗಣ್ಯರಾದ ಶ್ರೀ ಜನಾರ್ಧನ ಗೌಡ ಪಣೆಮಜಳು, ಶ್ರೀ ಕೃಷ್ಣ ಶೆಟ್ಟಿ ನಂದುಗುರಿ, ಶ್ರೀ ಸತೀಶ್ ನಾಯಕ್ ಶಾರದಾ ಸದನ, ಶ್ರೀ ಗಿರೀಶ್ ಎ ಪಿ ಆರಿಗ, ಶ್ರೀ ಸತೀಶ್ ನಾಯಕ್ ಮೇಗಿನ ಮನೆ, ಉಪ ತಹಶೀಲ್ದಾರ್ ಶ್ರೀ ಗೋಪಾಲ್, ಕಟ್ಟಡ ಕಾಂಟ್ರಾಕ್ಟ್ರ ಪುತ್ತು ಮೇಸ್ತ್ರಿ, ಮೀರಾ ಸಾಹೆಬ್ ಕಡಬ, ಮಹಮ್ಮದ್ ಸಾಹೆಬ್ ಕಡಬ, ಕೃಷ್ಣಪ್ಪ ಮಡಿವಾಳ, ಅಸ್ರಪ್ ಸೇಡಿಗುಂಡಿ ಕಡಬ, ಇಂಜಿನೀಯರ್ ಶ್ರೀಗಿರಿ ಕಡಬ, ಸೈಟ್ ಸೂಪರೇಜ್ ಝೀಯ ಕಡಬ, ಕಡಬ ಗೃಹರಕ್ಷಕ ದಳದ ಘಟಕಾಧಿಕಾರಿ ಶ್ರೀ ತೀರ್ಥೇಶ್ ಅಮೈ, ಹಿರಿಯ ಗೃಹರಕ್ಷಕರಾದ ಎಸ್ ಎಲ್ ಸುಂದರ್, ಎಸ್ ಎಲ್ ಉದಯಶಂಕರ್, ಜಯಪ್ರಕಾಶ್, ದಯಾನಂದ, ವಾಣಿ, ಹಾಗೂ ಇತರೆ 20 ಜನ ಗೃಹರಕ್ಷಕ ಗೃಹ-ರಕ್ಷಕಿಯರು ಉಪಸ್ಥಿತರಿದ್ದರು.