Ad Widget .

ಪೇಸ್ ಬುಕ್ ಪ್ರೇಮ ತಂದ ಪಜೀತಿ | ಮುಸ್ಲಿಂ ಯುವಕನ ವಿರುದ್ದ ಮತಾಂತರ ಕೇಸ್

ಬರೇಲಿ: ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾದ ಮುಸ್ಲಿಂ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರ ನಡೆಸಿ, ನನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಕೊಂಡು ವಿವಾಹವಾಗಿ ಇದೀಗ ಆತ ಹಾಗೂ ಆತನ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ದಲಿತ ಯುವತಿ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಉತ್ತರಪ್ರದೇಶದ ಬರೇಲಿಯಲ್ಲಿ ವರದಿಯಾಗಿದೆ.

Ad Widget . Ad Widget .

‘ ನನ್ನ ಮೇಲೆ ಬಲವಂತವಾಗಿ ದೈಹಿಕ‌ ಸಂಪರ್ಕ ಬೆಳೆಸಿ,‌ಗರ್ಭವತಿಯನ್ನಾಗಿ ಮಾಡಿದ್ದು ನಂತರ ಅಬಾರ್ಷನ್ ಮಾಡಿಸಿ, ಬಳಿಕ ತವರು ಮನೆಯಿಂದ 7 ಲಕ್ಷ ತರದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಬೆದರಿಸಿದ್ದಾರೆ ಎಂದು ದಲಿತ ಯುವತಿ ದೂರು ನೀಡಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ವಂಚಕ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget . Ad Widget .

ಇಷ್ಟೆಲ್ಲಾ ಹಿಂಸೆ ನೀಡಿರುವುದರ ಜತೆ ನನ್ನ ಜಾತಿ ನಿಂದನೆ ಮಾಡಿದ್ದಾರೆ ಎಂದೂ ಆಕೆ ದೂರಿನಲ್ಲಿ ಅಲವತ್ತುಕೊಂಡಿದ್ದಾಳೆ. ವಂಚಕ ಯುವಕ ಐದು ವರ್ಷಗಳ ಹಿಂದೆ ಆಕೆಯ ಸಹೋದರಿ ಫೇಸ್‍ಬುಕ್ ಖಾತೆಯಿಂದ ಯುವತಿಯನ್ನು ಪರಿಚಯಿಸಿಕೊಂಡು ನಂತರ ನಿಜ ತಿಳಿಸಿ ಪ್ರೇಮ ನಿವೇದನೆ ಮಾಡಿದ್ದ ನಂತರ ಫಿಲಿಬಿಟ್‍ನ ಮಾಲ್‍ಗೆ ಬರುವಂತೆ ಕರೆಸಿಕೊಂಡು ನಮ್ಮ ಮನೆಯವರ ಪರಿಚಯ ಮಾಡಿಕೊಡುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು ಆತನ ಮನೆಯಲ್ಲಿ ಅತ್ಯಾಚಾರ ನಡೆಸಿ ಅದರ ವಿಡಿಯೋ ಮಾಡಿದ್ದ, ಅತನ ಕೃತ್ಯಕ್ಕೆ ಅವರ ಮನೆಯವರು ಸಹಕರಿಸಿದ್ದರು ಎಂದು ಯುವತಿ ದೂರು ನೀಡಿದ್ದಾಳೆ ಎಂದು ಎಸ್‍ಪಿ ರೋಹಿತ್‍ಸಿಂಗ್ ಸಾಜ್ವನ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *