Ad Widget .

ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ರಾಷ್ಟ್ರಪತಿ ಸಂದೇಶ| ‘ಯಾವುದೇ ಗುರುತು ಇದ್ದರೂ ಭಾರತೀಯ ಎನ್ನುವುದೇ ಹೆಗ್ಗುರುತು’ – ದ್ರೌಪದಿ ಮುರ್ಮು

ಸಮಗ್ರ ನ್ಯೂಸ್: ಪ್ರತಿಯೊಬ್ಬ ಭಾರತೀಯನು ಜಾತಿ, ಧರ್ಮ, ಭಾಷೆಯಂತಹ ಅನೇಕ ಗುರುತುಗಳನ್ನು ಹೊಂದಿದ್ದಾನೆ. ಆದರೆ ಭಾರತೀಯ ಪ್ರಜೆ ಎಂಬ ಗುರುತು ಅದೆಲ್ಲವುಗಳಿಗಿಂತಲೂ ಹೆಚ್ಚಿನ ಸ್ಥಾನಮಾನವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳವಾರ ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಇದಕ್ಕೂ ಮುನ್ನಾ ಸೋಮವಾರ ಸಂಜೆ ಸ್ವಾತಂತ್ರ್ಯೋತ್ಸವ ಮತ್ತು ದೇಶವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು.

Ad Widget . Ad Widget . Ad Widget .

ಭಾಷಣ ಆರಂಭಕ್ಕೂ ಮುನ್ನ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಮಾತಂಗಿನಿ ಹಜ್ರಾ, ಕನಕಲತಾ ಬರುವಾ ಮತ್ತಿತರರನ್ನು ಅವರು ಸ್ಮರಿಸಿ ಗೌರವ ಸಲ್ಲಿಸಿದರು. ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.

ಪ್ರತಿಯೊಬ್ಬ ಭಾರತೀಯನೂ ಸಮಾನ ನಾಗರಿಕ, ಪ್ರತಿಯೊಬ್ಬರಿಗೂ ಈ ನೆಲದಲ್ಲಿ ಸಮಾನ ಅವಕಾಶ, ಹಕ್ಕು ಮತ್ತು ಕರ್ತವ್ಯಗಳಿವೆ. ಈ ದಿನ ನಮಗೆಲ್ಲರಿಗೂ ವೈಭವದ ಮತ್ತು ಮಂಗಳಕರ ಸಂದರ್ಭವಾಗಿದೆ. ಹಬ್ಬದ ಸಂಭ್ರಮ ಕಂಡು ಸಂತಸವಾಗಿದೆ.

ಈ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲು ಮಕ್ಕಳು, ಯುವಕರು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ನಗರಗಳು ಮತ್ತು ಹಳ್ಳಿಗಳಲ್ಲಿ, ಎಲ್ಲೆಡೆ ಹೇಗೆ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ನಾವು ನೋಡಬಹುದು. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *