ನವದೆಹಲಿ: ಬ್ಯಾಂಕುಗಳಿಗೆ ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ನೀಡಿದೆ. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ ೧೮,೧೭೦ ಕೋಟಿ ರೂ. ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಪಿಎಂಎಲ್‌ಎ ಕಾಯ್ದೆ ಅಡಿ ಜಪ್ತಿ ಮಾಡಿದೆ.
ಈ ಮೂಲಕ ಮೂವರಿಂದ ಬ್ಯಾಂಕ್‌ಗಳಿಗೆ ಆಗಿರುವ ನಷ್ಟದ ಶೇ.೮೦ರಷ್ಟು ಮೊತ್ತವನ್ನು ಜಪ್ತಿ ಮಾಡಿದಂತಾಗಿದೆ. ಇದರಲ್ಲಿ ೯,೩೭೧ ಕೋಟಿ ರೂ.ಗಳನ್ನು ಬ್ಯಾಂಕ್ ಗಳಿಗೆ ಒಪ್ಪಿಸಲಾಗಿದೆ ಎಂದು ಇಡಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.
ವಿಜಯ್ ಮಲ್ಯ ಹಾಗೂ ನೀರವ್ ಮೋದಿ, ಭಾರತದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿ ಇದೀಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಬ್ಬರನ್ನು ದೇಶಕ್ಕೆ ಕರೆತರಲು ಭಾರತ ಸರ್ಕಾರ ಇಂಗ್ಲೆಂಡ್ ಕೋರ್ಟ್ ನಲ್ಲಿ ‘ಹೋರಾಟ ನಡೆಸುತ್ತಿದೆ.
ಡೊಮಿನಿಕಾದಲ್ಲಿ ಸಿಕ್ಕಿ ಬಿದ್ದಿರುವ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಡೊಮಿನಿಕಾ ಸರ್ಕಾರ ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಘೋಷಿಸಿದ್ದು, ಭಾರತದ ಕಾನೂನು ಹೋರಾಟಕ್ಕೆ ಬಲ ಬಂದಿದೆ.