Ad Widget .

ನೀವು ಚಹಾ ಪ್ರಿಯರೇ? ಹಾಗಾದರೆ ಬಳಸಿದ ಚಹಾ ಪುಡಿಯನ್ನು ಎಸೆಯದೆ ಹೀಗೆ ಉಪಯೋಗಿಸಿ

ಸಮಗ್ರ ನ್ಯೂಸ್: ದಿನ ಬೆಳಗೆದ್ದು ಚಹಾ ಕುಡಿಯುವವರು ಇದನ್ನು ಮಿಸ್ ಮಾಡದೆ ಓದಿ. ವಿಶೇಷವಾಗಿ ಕಾಫಿಗಿಂತ ಚಹಾ ಉತ್ತಮ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚಹಾ ಮಾತ್ರವಲ್ಲದೆ, ಅದರ ಎಲೆ ಅಥವಾ ಪುಡಿಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದು ಮರಗಳಿಗೆ ಗೊಬ್ಬರವಾಗಿ ಮಾತ್ರವಲ್ಲದೆ ಇತರ ವಿಧಾನಗಳಲ್ಲಿಯೂ ಉಪಯೋಗಿಸಬಹುದು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರೂಮ್ ಸ್ಪ್ರೇ:
ಮಳೆಗಾಲದಲ್ಲಿ ಮನೆಯ ಜೊತೆಗೆ ಅಡುಗೆ ಮನೆಗೂ ಒಂದು ರೀತಿಯ ದುರ್ವಾಸನೆ ಬರುತ್ತದೆ. ನೊಣಗಳು ಅಡುಗೆಮನೆಯ ಸಿಂಕ್ ಸುತ್ತಲೂ, ಡಸ್ಟ್ ಬಿನ್ ಬಳಿ ಹಾರಾಡುತ್ತಿರುತ್ತವೆ. ಇವುಗಳಿಂದ ಉಂಟಾಗುವ ದುರ್ವಾಸನೆ ಹೋಗಲಾಡಿಸಲು ಈ ಚಹಾ ಪುಡಿ ತುಂಬಾ ಉಪಯುಕ್ತವಾಗಿವೆ. ಸ್ವಚ್ಛವಾದ ಬಟ್ಟೆ ತೆಗೆದುಕೊಂಡು, ಚಿಕ್ಕದಾಗಿ ಕಟ್ ಮಾಡಿ ಪ್ರತಿಯೊಂದಕ್ಕೂ ಒಂದು ಟೀ ಚಮಚ ಚಹಾ ಪುಡಿ ಹಾಕಿ, ಅದರಲ್ಲಿ 2-3 ಹನಿ ಸಾರಭೂತ ತೈಲ ಅಥವಾ ಇನ್ನಾವುದೇ ಸುವಾಸನಭರಿತ ಎಣ್ಣೆಯನ್ನು ಸೇರಿಸಿ ಬಿಗಿಯಾಗಿ ಕಟ್ಟಿ ಅಡುಗೆಮನೆಯ ವಿವಿಧ ಮೂಲೆಗಳಲ್ಲಿ ಇರಿಸಬಹುದು. ಡಸ್ಟ್ ಬಿನ್, ಕಿಚನ್ ಸಿಂಕ್ ಅಥವಾ ಕಿಚನ್ ಕಿಟಕಿಯ ಬಳಿ ನೇತು ಹಾಕುವುದು ಅಡುಗೆಮನೆಗೆ ಉತ್ತಮ ಸುವಾಸನೆಯನ್ನು ನೀಡುತ್ತದೆ.

Ad Widget . Ad Widget . Ad Widget .

ಚಾಪಿಂಗ್ ಬೋರ್ಡ್ ಶುಚಿಗೊಳಿಸುವಿಕೆ:
ತರಕಾರಿಗಳನ್ನು ಕತ್ತರಿಸಿದ ಚಾಪಿಂಗ್ ಬೋರ್ಡ್ ಅನ್ನು ಸ್ವಚ್ಛಗೊಳಿಸಲು ಚಹಾ ಪುಡಿ ಒಳ್ಳೆಯದು. ಒಂದು ಲೋಟ ನೀರಿನಲ್ಲಿ ಒಂದು ಚಮಚ ಟೀ ಪುಡಿ ಹಾಕಿ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಕೊಳಕಾದ ಚಾಪಿಂಗ್ ಬೋರ್ಡ್‌ಗೆ ಒಂದು ಟೀ ಚಮಚ ಡಿಶ್ ವಾಶ್, ಮೇಲೆ ತಿಳಿಸಿದ ಟೀ ಪುಡಿ ಮಿಶ್ರಣವು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತವೆ. ಇದು ಬೋರ್ಡ್‌ನಿಂದ ಬ್ಯಾಕ್ಟೀರಿಯಾವನ್ನು ಸಹ ತೆಗೆದುಹಾಕುತ್ತದೆ. ನಂತರ ಬೋರ್ಡ್ ಅನ್ನು ಉತ್ತಮ ನೀರಿನಿಂದ ಸ್ವಚ್ಛಗೊಳಿಸಿ.
(ಸಂಗ್ರಹ)

Leave a Comment

Your email address will not be published. Required fields are marked *