ಸಮಗ್ರ ನ್ಯೂಸ್: ಕಡಬ ತಾಲೂಕು ಕೊಯಿಲ ಎಂಡೋಪಾಲನಾ ಕೇಂದ್ರಕ್ಕೆ ಮಾನವ ಹಕ್ಕುಗಳ ಅಧ್ಯಕ್ಷ ಡಾ.ಯೋಗೇಶ್ ದುಬೆ ಆ. 10ರಂದು ಭೇಟಿ ನೀಡಿ ಪರಿಶೀಲಿಸಿದರು.
ದ.ಕ ಜಿಲ್ಲೆಯಲ್ಲಿರುವ ಎಂಡೋಪೀಡಿತರ ಬಗ್ಗೆ ಮತ್ತೆ ಅವರಿಗಿರುವ ಸೌಲಭ್ಯದ ಬಗ್ಗೆ ಪುತ್ತೂರು ತಾಲ್ಲೂಕಿನ ಅರೋಗ್ಯಧಿಕಾರಿ ಡಾ. ದೀಪಕ್ ರೈ. ಜಿಲ್ಲಾ ಮೆಡಿಕಲ್ ಆಫಿಸರ್ ಡಾ. ನವೀನ್ ಕುಲಾಲ್ ಮಾಹಿತಿ ನೀಡಿದರು.
ಇತ್ತೀಚಿಗೆಷ್ಟೆ ಕೊಯಿಲದಲ್ಲಿದ್ದ ಹಳೆ ಕಟ್ಟಡ ದಿಂದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇಲ್ಲಿಯ ವೆವಸ್ಥೆ, ಕಾರ್ಯವೈಖರಿಯನ್ನು ಗಮನಿಸಿದರು.
ಈಗ ಪಾಲನ ಕೇಂದ್ರ ಮುನ್ನೆಡೆಸುತ್ತಿರುವ ಬೆಳ್ತಂಗಡಿಯ ಸಿಯೋನ್ ಆಶ್ರಮ ಟ್ರಸ್ಟ್ ನ ವ್ಯವಸ್ಥಾಪಕ ಜಾಕ್ಸನ್ ಇವರನ್ನು ಸ್ವಾಗತಿಸಿ ಮಕ್ಕಳ ಬಗ್ಗೆ, ಇಲ್ಲಿಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಗೋಪಾಲಕೃಷ್ಣ, ಪುತ್ತೂರು ತಾಲ್ಲೂಕಿನ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಎಂಡೋ ಕೋ ಅರ್ಡಿನೆಟರ್ ಸಾಜುದ್ದಿನ್, ಕೊಯಿಲ ಅರೋಗ್ಯ ಕೇಂದ್ರದ ಡಾ.ಪ್ರಯನ್, ಪಾಲನಾ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.