Ad Widget .

ಇನ್ನು ಮುಂದೆ UPI ಪಿನ್‌ ಹಾಕದೇ 500 ರೂ. ಸೆಂಡ್‌ ಮಾಡಿ.!

ನವದೆಹಲಿ: ಮುಂದಿನ ದಿನಗಳಲ್ಲಿ ಯುಪಿಐ ಲೈಟ್ (UPI Lite) ವಹಿವಾಟು ಮಿತಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 200 ರೂ.ನಿಂದ 500 ರೂ.ಗೆ ಏರಿಸಿದ್ದು ಗ್ರಾಹಕರು ಯುಪಿಐ ಲೈಟ್‌ ಅಪ್ಲಿಕೇಶನ್‌ನಲ್ಲಿ ಪಿನ್‌ ಹಾಕದೇ 500 ರೂ. ಕಳುಹಿಸಬಹುದಾಗಿದೆ.

Ad Widget . Ad Widget . Ad Widget . Ad Widget .

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸುದ್ದಿಗೋಷ್ಠಿ ನಡೆಸಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮತ್ತು ಯುಪಿಐ ಲೈಟ್ ಸೇರಿದಂತೆ ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ 200 ರೂ. ಮತ್ತು ದಿನದ ವಹಿವಾಟಿಗೆ 2,000 ರೂ. ಮಿತಿ ಹೇರಲಾಗಿತ್ತು. ಜನರಿಂದ ಮನವಿ ಬಂದಿರುವ ಹಿನ್ನಲೆ ಪ್ರತಿ ವಹಿವಾಟಿನ ಮೌಲ್ಯವನ್ನು 200 ರೂ. ನಿಂದ 500 ರೂ.ಗೆ ಏರಿಸಲಾಗಿದೆ ಎಂದರು.
ಬಳಕೆದಾರರಿಗೆ ಡಿಜಿಟಲ್ ಪಾವತಿಯ ಅನುಭವವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ. ಯುಪಿಐನಲ್ಲಿ ಸಂಭಾಷಣಾ ಪಾವತಿಗಳನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರಲಿದ್ದು ಬಳಿಕ ಭಾರತದ ಎಲ್ಲ ಭಾಷೆಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಇದು ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಮತ್ತು ಆಫ್‌ಲೈನ್ ಅನ್ನು ಪರಿಚಯಿಸಲು AI- ಚಾಲಿತ ವ್ಯವಸ್ಥೆಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.

Ad Widget . Ad Widget .

ಯುಪಿಐ ಲೈಟ್‌ ಮೂಲಕ NFC ತಂತ್ರಜ್ಞಾನವನ್ನು ಬಳಸಿಕೊಂಡು ಆಫ್‌ಲೈನ್‌ ಪಾವತಿ ಪರಿಚಯಿಸಲು ಆರ್‌ಬಿಐ ಸಿದ್ಧವಾಗಿದೆ. ಈ ವೈಶಿಷ್ಟ್ಯವು ಸೀಮಿತ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡಬಹುದು ಎಂದರು.
ರೆಪೋ ದರವನ್ನು (Repo Rate) 6.50% ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಆರ್‌ಬಿಐ ಕೈಗೊಂಡಿದೆ. ಮೂರು ದಿನ ಚರ್ಚೆ ನಡೆಸಿದ ಎಂಪಿಸಿ ಸದಸ್ಯರು ರೆಪೋ ದರದಲ್ಲಿ ಬದಲಾವಣೆ ಮಾಡದಿರಲು ಸರ್ವಾನುಮತದಿಂದ ಒಪ್ಪಿದ್ದಾರೆ. 2024ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ 6.5% ರಷ್ಟು ಇರಲಿದೆ ಎಂದು ಎಂಪಿಸಿ ಅಂದಾಜಿಸಿರುವುದಾಗಿಯೂ ಅವರು ತಿಳಿಸಿದ್ದಾರೆ

UPI-Lite ಮತ್ತು UPI ನಡುವಿನ ವ್ಯತ್ಯಾಸವೇನು?
ಯುಪಿಐ ಮೂಲಕ ಹೆಚ್ಚಿನ ಮೌಲ್ಯದ ಹಾಗೂ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಿರ್ವಹಿಸಲು ಬಳಸಬಹುದು. UPI-ಲೈಟ್ ನಲ್ಲಿ ನಿರ್ದಿಷ್ಟವಾಗಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ಮಾತ್ರ ಮಾಡಬಹುದು.

Leave a Comment

Your email address will not be published. Required fields are marked *