ಸಮಗ್ರ ನ್ಯೂಸ್: ಚಿನ್ನದಷ್ಟೇ ಬೆಲೆ ಹೊಂದಿದ್ದ ಟೊಮ್ಯಾಟೋ ಬೆಲೆಯಲ್ಲಿ ಈಗ ಕುಸಿತ ಕಂಡಿದ್ದು, ಇದೀಗ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ.
ಕಳೆದ ಜೂನ್ ತಿಂಗಳಿನಿಂದ ಮುಂಗಾರಿನ ಅಭಾವದಿಂದ ಟೊಮ್ಯಾಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಇದರಿಂದ ರೈತರಿಗೇನೋ ತುಂಬಾ ಲಾಭವಾಯಿತು ಆದರೆ ಗ್ರಾಹಕರಿಗೆ ಎಟುಕಲಾರದಂತಹ ದರದಲ್ಲಿ ಟೊಮೇಟೊ ಮಾರಾಟವಾಗಿತ್ತು.
ಆದರೆ ಈಗ ಕಳೆದು ಒಂದು ವಾರದಿಂದ ಟೊಮ್ಯಾಟೋ ಬೆಲೆ ಕುಸಿತ ಕಂಡಿದ್ದು, ಇದೀಗ ಒಂದು ಬಾಕ್ಸ್‌ಗೆ 1000 ರೂಪಾಯಿ ಇಂದ 1200 ರೂಪಾಯಿಗೆ ಮಾರಾಟವಾಗುತ್ತಿದ್ದು, ಕೆಜಿಗೆ 60 ರಿಂದ 80 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಕೋಲಾರ ಮಾರುಕಟ್ಟೆ ಎಪಿಎಂಸಿಯಿಂದ ಉತ್ತರ ಭಾರತದ ಹಲವು ರಾಜ್ಯಗಳಿಗೆ ಸೇರಿದಂತೆ ಬಾಂಗ್ಲಾ ಪಾಕಿಸ್ತಾನ ಹಾಗೂ ದುಬಾಯಿಗಳಂತ ವಿದೇಶಗಳಿಗೂ ಟೊಮ್ಯಾಟೋ ರಫ್ತಾಗುತ್ತಿತ್ತು. ಆದರೆ ಸಕಾಲದಲ್ಲಿ ಉತ್ತರದಲ್ಲಿ ಮಳೆ ಆಗದ ಕಾರಣ ಕೋಲಾರ ಎಪಿಎಂಸಿಯಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ತರ ಭಾರತಕ್ಕೆ ಟೊಮೇಟೊ ರಫ್ತಾಗಿತ್ತು. ಇದರಿಂದ ಟೊಮೇಟೊ ಪೂರೈಕೆ ಹೆಚ್ಚಾಗಿರುವುದು ಹಾಗೂ ಬೇಡಿಕೆ ಕಡಿಮೆ ಇರುವುದರಿಂದ ಈ ವಾರದಿಂದ ಟೊಮ್ಯಾಟೋ ಬೆಲೆ ಇನ್ನೂ ಕುಸಿತ ಕಾಣಬಹುದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.