ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆ ಮಂಗಳೂರು ಮೂಲದ ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗಳಿಗೆ ಮೂರು ವರ್ಷ. ಐದು-ಪೀಳಿಗೆಯ ಈ ಕುಟುಂಬ ಸದಸ್ಯರನ್ನು ಒಗ್ಗೂಡಿಸಿದ್ದು ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಆರಂಭಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅಡಿಯಲ್ಲಿ ಖಾತೆಗಳನ್ನು ತೆರೆದಿದ್ದಾರೆ.
ಆಗಸ್ಟ್ 3 ರಂದು ಮಂಗಳೂರು ಸಮೀಪದ ಕಿನ್ನಿಗೋಳಿ ಉಪ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದ ಭಾರತದ ಏಕೈಕ ಐದು ತಲೆಮಾರಿನ ಕುಟುಂಬ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕುಪ್ಪೆಪದವು ನಿವಾಸಿ ಸೀತಾ ಪೂಜಾರ್ತಿ (103 ವ); ಕೈಕಂಬದಲ್ಲಿ ವಾಸವಾಗಿರುವ ಅವರ ಪುತ್ರಿ ಸುಂದರಿ ಪೂಜಾರ್ತಿ (72 ವ); ಆಕೆಯ ಮೊಮ್ಮಗಳು ಉಲ್ಲೈ ಬೇತುವಿನ ಯಮುನಾ ಪೂರ್ಜಾರ್ತಿ (50 ವ); ಆಕೆಯ ಮರಿ ಮೊಮ್ಮಗಳು ಪವಿತ್ರಾ ವಿ ಅಮೀನ್ (33 ವ ); ಮತ್ತು ಅವರ ಮರಿ ಮರಿ ಮೊಮ್ಮಗಳು ದಿತ್ಯಾ ವಿ ಅಮೀನ್ (3 ವ) ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ MSSC ಅಡಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ.
ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯ ಕಿನ್ನಿಗೋಳಿ ಉಪ ಅಂಚೆ ಕಛೇರಿಯ ಸಿಬ್ಬಂದಿ ಈ ಸಾಧನೆಗಾಗಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹಿರಿಯ ಮಹಿಳೆಯರ ನಿವಾಸಗಳಿಗೆ ಭೇಟಿ ನೀಡಿದ್ದಲ್ಲದೆ, ಜಿಲ್ಲೆಯ ವಿವಿಧೆಡೆ ನೆಲೆಸಿರುವ ಅವರೆಲ್ಲರನ್ನೂ ಪವಿತ್ರಾಳ ಪತಿ ವಿಜಯ್ ಅಮೀನ್ ಕಾರಿನಲ್ಲಿ ಅಂಚೆ ಕಚೇರಿಗೆ ಕರೆತಂದರು.
ಕುಟುಂಬದ ಅನನ್ಯ ಸಾಧನೆ ಗುರುತಿಸಿ ಹತ್ತಿರದ ರೆಸ್ಟೋರೆಂಟ್ನಲ್ಲಿ ಸವಿಯಾದ ಭೋಜನ ಕೊಡಿಸಿದ್ದಲ್ಲದೆ ಜೊತೆಗೆ ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು ಎಂದು ಕಿನ್ನಿಗೋಳಿಯ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮುಖ್ಯಸ್ಥ ಕೆ ರಘುನಾಥ್ ಕಾಮತ್ TNIE ಗೆ ತಿಳಿಸಿದರು.