ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅಂಬ್ಯಲೆನ್ಸ್ ಮೂಲಕ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.
ಕೆಂಪೇಗೌಡ ವಿಮಾನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ಗೆ ಸ್ಪಂದನಾ ಅವರ ಮೃತದೇಹ ಆಗಮಿಸಿದೆ. ನಿಯಮಾನುಸಾರ ಪಾರ್ಥಿವ ಶರೀರದ ಸ್ಕ್ಯಾನಿಂಗ್ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳು ಸರ್ಟಿಫಿಕೆಟ್ ನೀಡುತ್ತಾರೆ. ಕಸ್ಟಮ್ಸ್ ಅಧಿಕಾರಿಗಳು ಕ್ಲಿಯರೆನ್ಸ್ ನೀಡಿದ ಬಳಿಕ ಪಾರ್ಥವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
ಸ್ಪಂದನಾ ವಿಜಯ್ ಅವರ ಪತಿ ವಿಜಯ್ ರಾಘವೇಂದ್ರ ಅವರು ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೇ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರ ಸಂಬಂಧಿಕರು ಕೂಡ ಏರ್ ಪೋರ್ಟ್‌ಗೆ ಆಮಿಸಿದ್ದಾರೆ. ಸ್ಪಂದನಾ ಅವರ ಮೃತದೇಹ ತಂದೆ ಬಿ.ಕೆ.ಶಿವರಾಂ ಅವರ ನಿವಾಸಕ್ಕೆ ಸಾಗಲಿದೆ. ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಹಾಗೂ ಶಾಸಕ ಮುನಿರತ್ನ ಅವರು ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಸ್ಪಂದನಾ ತಂದೆ ಬಿ.ಕೆ ಶಿವರಾಮ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಂತಿಮ ದರ್ಶನ ಆರಂಭವಾಗಿದ್ದು, ಇಂದು ಮಧ್ಯಾಹ್ನ 2 ಗಂಟೆವರೆಗೂ ಅಂತಿಮ ದರ್ಶನ ಇರಲಿದೆ. ಬಳಿಕ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದು, ಸರತಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.