Ad Widget .

ಬೆಂಗಳೂರು: ನೀರಿನ ಟ್ಯಾಂಕ್ ಬಿದ್ದು ಎಗ್ ರೈಸ್ ಅಂಗಡಿ ಮಾಲೀಕ, ಗ್ರಾಹಕ ಸಾವು

ಸಮಗ್ರ ನ್ಯೂಸ್: ಬಹು ಮಹಡಿ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಹಾಗೂ ಗೋಡೆ ಕುಸಿದು ಬಿದ್ದು ಅಮಾಯಕರಿಬ್ಬರು ಸಾವನ್ನಪ್ಪಿರುವ ಘಟನೆ ಶಿವಾಜಿ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಿವಾಜಿನಗರ ಬಸ್ ನಿಲ್ದಾಣದಲ್ಲಿರುವ ಓಕ್ ಫರ್ನೀಚರ್ ಕಟ್ಟಡದ ಮೇಲೆ 5 ಸಾವಿರ ಲೀಟರ್‌ನ ಎರಡು ನೀರಿನ ಟ್ಯಾಂಕ್ ಇರಿಸಿಲಾಗಿತ್ತು. ಬುಧವಾರ ರಾತ್ರಿ ನಾಲ್ಕನೇ ಮಹಡಿಯಲ್ಲಿ ಇರಿಸಿದ್ದ ನೀರಿನ ಟ್ಯಾಂಕ್ ಯ ಗೋಡೆ ಕುಸಿದು ಬಿದ್ದಿವೆ.

Ad Widget . Ad Widget . Ad Widget .

ಟ್ಯಾಂಕ್ ಹಾಗೂ ಗೋಡೆ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಇದ್ದ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅದೇ ಸಮಯಕ್ಕೆ ಎಗ್ ರೈಸ್ ಸವಿಯಲು ಬಂದಿದ್ದ ಮೂವರ ಮೇಲೆ ಟ್ಯಾಂಕ್ ಹಾಗೂ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟಿರುವ ಇಬ್ಬರಲ್ಲಿ ಒಬ್ಬರು ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬರು ಗ್ರಾಹಕ ಎಂದು ತಿಳಿದುಬಂದಿದೆ.

ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಕಟ್ಟಡದ ಮಾಲೀಕ ಟ್ಯಾಂಕ್ ಇಡಲು ಅವೈಜ್ಞಾನಿಕವಾಗಿ ಕಟ್ಟಡ ಕಟ್ಟಿದ್ದರ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಕಂಡು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸದ್ಯ ನಿರ್ಲಕ್ಷ್ಯ ಆರೋಪದಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಟ್ಟಡದ ಮಾಲೀಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *