Ad Widget .

ವಿಟ್ಲ: ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹಣ ದುರುಪಯೋಗ: ಟ್ರಸ್ಟಿಗಳ ಮೇಲೆ ಎಫ್ಐಆರ್

ಸಮಗ್ರ ನ್ಯೂಸ್: ಟ್ರಸ್ಟ್ ಕಾರ್ಯದರ್ಶಿಯ ಗಮನಕ್ಕೆ ತಾರದೆ, ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ನಲ್ಲಿದ್ದ ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿದ ವಿಟ್ಲ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯ ಟ್ರಸ್ಟಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ.

Ad Widget . Ad Widget .

ವಿಟ್ಲ ಮುಡ್ನೂರು ಗ್ರಾಮದಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ಆಡಳಿತವು ಟ್ರಸ್ಟ್ ಡೀಡ್ ಪ್ರಕಾರ ನೋಂದಣಿಗೊಂಡಿದ್ದು, ಮಹಮ್ಮದ್ ಇರ್ಫಾನ್ ಟ್ರಸ್ಟ್ ಕಾರ್ಯದರ್ಶಿ ಯಾಗಿರುತ್ತಾರೆ. ಟ್ರಸ್ಟೀಗಳಾದ ಹಾಸನದಲ್ಲಿ ವಾಸ್ತವ್ಯವಿರುವ ಫಾತಿಮಾ ನಸ್ರೀನ್ ಬಶೀರ್ ಕೋಂ ಡಾ ಅಬ್ದುಲ್ ಬಶೀರ್ ವಿ.ಕೆ , ಶಾರೂಕ್ ಅಬ್ದುಲ್ಲಾ ಬಿನ್ ಡಾ ಅಬ್ದುಲ್ ಬಶೀರ್ ವಿ.ಕೆ, ಶಫಾಕ್ ಮುಹಮ್ಮದ್ ಬಿನ್ ಡಾ ಅಬ್ದುಲ್ ಬಶೀರ್ ವಿ.ಕೆ ಟ್ರಸ್ಟ್ ಕಾರ್ಯದರ್ಶಿ ಸಹಿ ಇಲ್ಲದೆ, ರಹಸ್ಯವಾಗಿ ಯೂನಿಯನ್ ಬ್ಯಾಂಕ್ ವಿಟ್ಲ ಶಾಖೆಯಲ್ಲಿ ಜನಪ್ರಿಯ ಟ್ರಸ್ಟ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೊತ್ತವನ್ನು ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ಹಿಂದೆಗೆದು, ಬ್ಯಾಂಕ್ ಖಾತೆಯನ್ನು ಮುಕ್ತಾಯಗೊಳಿಸಿದ್ದರು.

Ad Widget . Ad Widget .

ಈ ಹಿನ್ನೆಲೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್ ಅವರು ಜನಪ್ರಿಯ ಶಾಲೆಯ ಟ್ರಸ್ಟೀಗಳಾದ ಫಾತಿಮಾ ನಸ್ರೀನ್ ಬಶೀರ್, ಶಾರೂಕ್ ಅಬ್ದುಲ್ಲಾ ಮತ್ತು ಶಫಾಕ್ ಮುಹಮ್ಮದ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ ಕಲಂ 406,409,419,420 ಮತ್ತು 465 ಅಡಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *