ಸಮಗ್ರ ನ್ಯೂಸ್: ಜೂನ್ ಮತ್ತು ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ನೀಡಿದ್ದ ರಜೆಗಳನ್ನು ಸರಿದೂಗಿಸಲು ನವಂಬರ್ 4ರ ತನಕ ಶನಿವಾರ ದಿನ ಪೂರ್ತಿ ತರಗತಿಗಳು ನಡೆಯಲಿದೆ. ಈ ವರ್ಷ ಮಳೆಯ ಕಾರಣ ಸುಳ್ಯದಲ್ಲಿ 6 ದಿನ ರಜೆ ನೀಡಲಾಗಿತ್ತು. ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಶನಿವಾರದಂದು ಸಹ ಪೂರ್ತಿ ದಿನ ತರಗತಿಗಳು ನಡೆಸಲು ನಿರ್ಧರಿಸಿದೆ.
ಒಂದು ದಿನದ ರಜೆಗೆ ಎರಡು ಶನಿವಾರ ತರಗತಿ ನಡೆಸಿ ರಜೆಯನ್ನು ಸರಿದೂಗಿಸಿ ವೇಳಾ ಪಟ್ಟಿ ಹೊರಡಿಸಿದೆ. ಅದರನ್ವಯ ನ.4 ರವರೆಗೆ ದಿನಪೂರ್ತಿ ತರಗತಿಗಳು ನಡೆಯಲಿದೆ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಯೋಜನಾಧಿಕಾರಿ ತಿಳಿಸಿದ್ದಾರೆ.