ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆಗಸ್ಟ್ 3 ರಿಂದ ವರುಣಾರ್ಭಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಬಿಟ್ಟು ಉಳಿದ ಭಾಗಗಳಾದ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಎಂದಿನಂತೆ ವಾಡಿಕೆ ಮಳೆಯಾಗಲಿದೆ.
ಸಿದ್ದಾಪುರ, ಕ್ಯಾಸಲ್ ರಾಕ್, ಗೇರುಸೊಪ್ಪ, ಶೃಂಗೇರಿ, ಕಾರ್ಕಳ, ಬೆಳ್ತಂಗಡಿ, ಕದ್ರಾ, ಕೊಟ್ಟಿಗೆಹಾರ, ಕಮ್ಮರಡಿ, ಕೊಪ್ಪ, ಜಯಪುರ, ಕುಂದಾಪುರ, ಕೊಲ್ಲೂರು, ಹೊನ್ನಾವರ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಪುತ್ತೂರು, ಮಂಚಿಕೆರೆ, ಕುಮಟಾ, ಶಿರಾಲಿ, ಮಂಕಿ, ಬೇಲಿಕೇರಿ, ಲೋಂಡಾ, ಜೇವರ್ಗಿ, ತಾಳಗುಪ್ಪ, ಸುಳ್ಯ, ಮುಲ್ಕಿ, ಕೋಟ, ಗುಂಜಿ, ಕಮಲಾಪುರ, ಅಫಜಲಪುರ, ಬಿಳಗಿ, ಹಾವೇರಿ, ಪಿಟಿಒ, ಬಸವನ ಬಾಗೇವಾಡಿ, ಸೋಮವಾರಪೇಟೆ, ಭಾಗಮಂಡಲ, ಶನಿವಾರಸಂತೆ, ಕಳಸ, ಬಾಳೆಹೊನ್ನೂರು, ಸಕಲೇಶಪುರ, ಹುಂಚದಕಟ್ಟೆಯಲ್ಲಿ ಮಳೆಯಾಗಿದೆ.
ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ಬಳಿ ಮಳೆಯಾಗುವ ಸಾಧ್ಯತೆಯಿದೆ ಕೆಲ ಕ್ಷಣ ಕಾಲ ಮಾತ್ರ ಬಿಸಿಲು ಕಾಣಿಸಲಿದೆ ಎಂದು ವರದಿಯಾಗಿದೆ.