ಸಮಗ್ರ ನ್ಯೂಸ್: ಸಂಪಾಜೆ ಪರಿಸರದಲ್ಲಿ ಚಿರತೆ ಕಾಟ ಶುರುವಾಗಿದೆ. ಮನೆಯ ಮುಂದೆ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದ್ದು ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆಯ ಬಂಟೋಡಿಯ ತೇಜೇಶ್ವರ್ ಬಂಟೋಡಿ ಅವರ ಮನೆಯ ಎದುರಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅಂಗಳದಲ್ಲಿದ್ದ ಶ್ವಾನದ ಮೇಲೆ ದಾಳಿ ನಡೆಸಿ ಓಡಿದೆ.
ಈ ಬಗ್ಗೆ ಜೊತೆಗೆ ಮಾತನಾಡಿದ ತೇಜಸ್ ಬಂಟೋಡಿಯವರು, ಚಿರತೆ ಬಂದು ಮನೆಯಲ್ಲಿದ್ದ ಶ್ವಾನದ ಮೇಲೆ ದಾಳಿ ಮಾಡಿದೆ. ನಾವು ಕಿರುಚಿಕೊಂಡಾಗ ಅದು ಶಬ್ಧಕ್ಕೆ ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆ. ನಮಗೆ ಮಾತ್ರವಲ್ಲ ಬಂಟೋಡಿ ಪರಿಸರದಲ್ಲಿ ಇನ್ನೂ ಕೆಲವರಿಗೆ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ನಾವು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಅವರು ಬಂದು ಕ್ಯಾಮೆರಾ ಇರಿಸಿ ಅದರ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ತೇಜೇಶ್ವರ್ ಮನೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಹೆಚ್ಚು ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.