ಸಮಗ್ರ ನ್ಯೂಸ್: ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ರಾಜ್ಯದ ಸಾಮಾನ್ಯ ಜನರ ದೈನಂದಿನ ಜೀವನ ತತ್ತರಿಸಿ ಹೋಗಿದೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ, ಸರಕಾರವು ಮತ್ತೊಂದು ಶಾಕ್ ಕೊಟ್ಟಿದೆ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ. 3 ಹೆಚ್ಚಳ ಮಾಡಲಾಗಿದೆ.
ನಾಳೆಯಿಂದ ಯಾವ ಹಾಲಿನ ಬೆಲೆ ಎಷ್ಟೆಷ್ಟು ಹೆಚ್ಚಳ ಎನ್ನುವುದನ್ನು ನೋಡುವುದಾದ್ರೆ ,
ನಂದಿನಿ ಟೋನ್ಡ್ ಮಿಲ್ಕ್ 1 ಲೀಟರ್‌ಗೆ 37-40ರೂ., ಅರ್ಧ ಲೀಟರ್‌ಗೆ 20-22 ರೂ., ಶುಭಂ ಸ್ಟ್ಯಾಂಡರ್ಡ್ ಲೀಟರ್ ಗೆ 43-46 ರೂ., ಅರ್ಧ ಲೀಟರ್‌ಗೆ 23-25 ರೂ. ಹೋಮೋಜೀನೈಜ್ಡ್ 1 ಲೀ. 42-45, ರೂ. ಅರ್ಧ ಲೀಟರ್ 23-25 ರೂ., 200 ಮಿಲೀ. 11-12 ರೂ., ಮೊಸರು ಅರ್ಧ ಲೀ. 24-26 ರೂ., 200 ಮಿಲೀ 11-12 ರೂ., ಮಜ್ಜಿಗೆ 200ಮಿಲೀ. 8-9 ರೂ., ಸ್ವೀಟ್ ಲಸ್ಸೀ 200ಮಿಲೀ 12- 13ರೂ.