Ad Widget .

ಕರಾವಳಿಯ ಕುಗ್ರಾಮಗಳಿಗೂ BSNL 4ಜಿ ಸೇವೆ| ಯಾವ ಗ್ರಾಮಕ್ಕೆ ಈ ಸೇವೆ ಲಭಿಸಲಿದೆ?| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಕೇಂದ್ರ ಸರಕಾರವು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (Universal Service Obligation Fund)ಯಡಿ ದೇಶಾದ್ಯಂತ ಸ್ವಲ್ಪವೂ ನೆಟ್ವರ್ಕ್ ತಲುಪದ 3 ಲಕ್ಷಕ್ಕೂ ಅಧಿಕ ಕುಗ್ರಾಮಗಳಲ್ಲಿ BSNL 4ಜಿ ಸೇವೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳಲಿದೆ. ಇದರಿಂದ ಕರಾವಳಿಯ ಕುಗ್ರಾಮಗಳಿಗೂ ಇನ್ನು ನೆಟ್ವರ್ಕ್ ಲಭಿಸಲಿದೆ.

Ad Widget . Ad Widget .

ಸರಕಾರಿ ಸ್ವಾಮ್ಯದ BSNL ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೇಂದ್ರ ಸರಕಾರವು ಮೇಕ್ ಇನ್ ಇಂಡಿಯಾದಡಿ ಟಿಸಿಎಸ್ (Tata Consultancy Services) ಮತ್ತು ಐಟಿಐ ಲಿ. ಒಪ್ಪಂದದೊಂದಿಗೆ ದೇಶದ ವಿವಿಧೆಡೆ 4ಜಿ ನೆಟ್ವರ್ಕ್ ಟವರ್ ಸ್ಥಾಪಿಸಲಿದೆ. ಈಗಿರುವ 4G ಯನ್ನೇ ಮುಂದೆ 5G ಆಗಿ ಪರಿವರ್ತಿಸಲು ಕೂಡ ಸಾಧ್ಯವಿದೆ.

Ad Widget . Ad Widget .

ದಕ್ಷಿಣ ಕನ್ನಡದ ಎಲ್ಲೆಲ್ಲಿ ನೂತನ ಟವರ್ ನಿರ್ಮಾಣ?

1.ಬಂಟ್ವಾಳ ತಾಲೂಕಿನ ಕೈಲಾರು, ಹಂಚಿಕಟ್ಟ, ಬೋಳಂತೂರು ಕೇಶವ ನಗರ, ಕುರಿಯಾಲ, ಅಚ್ಚಿಟ್ಟು, ನಾಟಿಕಲ್ಲು.
2.ಬೆಳ್ತಂಗಡಿ ತಾಲೂಕಿನ ಪೆರಾದಿ, ಅಣಿಯೂರು, ಬದನಾಜೆ, ನಿಟ್ಟದ, ಬರೆಂಗಾಯ, ಚಾರ್ಮಾಡಿ ಕಾಂಪಾಲ್, ಮಾಲಾದಿ ಕರಿಯಬೆ, ತಮ್ಮಟೆ, ಕೊಡಿಯಾಲುಬೈಲು, ಕೊಲ್ಲಾದಿ, ಕುಯ್ದಿಟ್ಟು, ಟೈನಾದಿ, ಮುಂಡೂರು, ಹೆರ್ವಡ್ಕ ಮಿಯಲಾಜೆ, ಎಳನೀರು, ಪೆರ್ಲ.
3.ಕಡಬ ತಾಲೂಕಿನ ಕುರ್ಡೂರು, ಒಲಕಡಮ, ಮಂಜುನಾಥ ನಗರ, ಉಳಿಪ್ಪ, ಕಲ್ಲಪ್ಪಾರು, ಮಂಜೋಲಿ ಮಲೆ, ಆಲಂತಾಯ, ಚಿತ್ತೋದಿ, ದೋಲ್ವಾಡಿ, ಪುತ್ತಿಗೆ, ಸಿರಿಬಾಗಿಲು, ಸುರುಳಿ.
4.ಮಂಗಳೂರು ತಾಲೂಕಿನ ಒಡೂರು, ಮೂಡುಬಿದಿರೆಯ ಕೇಮಾರು, ಪಡುಮಾಯಾದಿನ ಮೂರುಗೋಳಿ.
5.ಪುತ್ತೂರು ತಾಲೂಕಿನ ಕೊರಂಬಡ್ಕ, ಕುವೆಟ್ಟಾರು, ದೂಮಡ್ಕ, ಎಟ್ಟಡ್ಕ, ಗುತ್ತಿಕಲ್ಲು, ನೆಟ್ಟಣಿಗೆ ಪನ್ನೀರು.
6.ಸುಳ್ಯ ತಾಲೂಕಿನ ಕಂದ್ರಪಾದಿ, ದೇವ, ಗಬ್ಬಲಡ್ಕ, ಸೋಣಂಗೇರಿ, ಪೆರಂಗೋಡಿ, ದೇರಾಜೆ, ಪೇರಾಲು, ಮಡಪ್ಪಾಡಿ ಗುಡ್ಡೆ ಮನೆ, ಬಾಳುಗೋಡು, ಆಚೆಲ್ಲಿ, ಟಿಕ್ಕಿನಡ್ಕ, ಬಡ್ಡಡ್ಕ, ಬಾಂಬಿಡಿ, ತಿಮ್ರಾಣಿಯ ಬೆಟ್ಟ ಬೊಳ್ಳಾಜೆ, ಟೀಮು, ಕಟ್ಟ, ಕೊಪ್ಪಡ್ಕ, ಕೋನಡ್ಕ, ಕೂರ್ನಡ್ಕ ಕೂತ್ಕುಂಜ, ಕುತ್ತಮೊಟ್ಟೆ, ಅಜ್ಜಾವರ ಮುಳ್ಳ, ನಾರ್ಣಕಜೆ.
ಈ ಸ್ಥಳಗಳಲ್ಲಿ BSNL ಟವರ್ ನಿರ್ಮಾಣಗೊಳ್ಳಲಿವೆ.

ಉಡುಪಿ ಜಿಲ್ಲೆಯ ಪಂಚನ ಬೆಟ್ಟು, ಕಾರ್ಕಳದ ಕೌಡೂರು, ಮಾಳ ಹುಕಟ್ಟೆ, ಮುಟ್ಟುಪಾಡಿ, ನೂರಾಲ್ಬೆಟ್ಟು, ಕಾಂತಾವರದ ಬೆಲ್ಲಾಡಿ, ಬೈಂದೂರಿನ ನಾಗರಮಕ್ಕಿ, ಗಂಗನಾಡು, ಮೂಡನಗಡ್ಡೆ, ಬೊಳ್ಳಂಬಳ್ಳಿ, ಚುಚ್ಚಿ, ಕೊಲ್ಲೂರು ದಳಿ, ಜಡ್ಕಲ್ ಬಪ್ರಿಬೇರು, ಇಡೂರು ಕುಕ್ಕಡ, ಬರದಕಲ್ಲು, ಬೆಳ್ಳಾಲ ಊರುಬೈಲ್, ನಂದೊಳ್ಳಿ, ಹಳ್ಳಿಹೊಳೆಯ ಇರಿಗೆ, ಕುಂದನ ಬೈಲು, ಕಬ್ಬಿನಾಲೆ ಕುಂದಾಪುರದ ಆರ್ಗೋಡು, ಎಳೆಬೇರು, ಬೆಚ್ಚಳ್ಳಿ, ಸಿದ್ದಾಪುರದ ಐರಬೈಲು, ಸೋಣಿ, ಮಡಾಮಕ್ಕಿ, ಕರ್ಜೆ ಕುರ್ಪಾಡಿ, ಕಾಸನಮಕ್ಕಿಗಳಲ್ಲಿ ಟವರ್ ಸ್ಥಾಪನೆಯಾಗಲಿವೆ.

ದೇಶಾದ್ಯಂತ ನೆಟ್ವರ್ಕ್
ಸ್ಯಾಚುರೇಶನ್ ಆಫ್ 4ಜಿ ಮೊಬೈಲ್ ಯೋಜನೆಯಡಿ ಯುನಿವರ್ಸಲ್ ಸರ್ವೀಸ್ ಅಬ್ಲಿಗೇಶನ್ ಫಂಡ್ ಮೂಲಕ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಆತ್ಮನಿರ್ಭರ್ ಭಾರತ್ನ 4ಜಿ ತಂತ್ರಜ್ಞಾನ ಬಳಸಿದೆ. ದೇಶದಾದ್ಯಂತ ತೀರಾ ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆ ಒದಗಿಸುವುದು ಇದರ ಉದ್ದೇಶ. ಒಟ್ಟು 26,316 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ದೂರದ ಮತ್ತು ಕಷ್ಟಕರ ಪ್ರದೇಶಗಳ 24,680 ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಒದಗಿಸಲಿದೆ. ಇದರೊಂದಿಗೆ ಈಗಾಗಲೇ ಇರುವ 2ಜಿ ಅಥವಾ 3ಜಿ ಸಂಪರ್ಕ ಹೊಂದಿರುವ 6,279 ಗ್ರಾಮಗಳನ್ನು 4ಜಿಗೆ ಅಪ್ಡೇಟ್ ಮಾಡಲಾಗುತ್ತದೆ. 4ಜಿ ಸ್ಯಾಚುರೇಶನ್ ಪ್ರೊಜೆಕ್ಟ್ನಡಿ ದೇಶಾದ್ಯಂತ 17 ಸಾವಿರ, ಕರ್ನಾಟಕದಲ್ಲಿ 700ಕ್ಕೂ ಅಧಿಕ ತೀರಾ ಹಳ್ಳಿಗಾಡು ಪ್ರದೇಶದಲ್ಲಿ ಈ ಟವರ್ ಸ್ಥಾಪನೆಯಾಗಲಿದೆ.

ದ.ಕ. ಜಿಲ್ಲೆಯಲ್ಲಿ 66, ಉಡುಪಿ ಜಿಲ್ಲೆಯ 36 ಕಡೆ ರಾಷ್ಟ್ರೀಯ ಉದ್ಯಾನವನ ಸಹಿತ ಅರಣ್ಯದಂಚಿನ ಪ್ರದೇಶಗಳಲ್ಲಿ ನೂತನ 4ಜಿ ನೆಟ್ವರ್ಕ್ ಟವರ್ ಸ್ಥಾಪನೆಗಾಗಿ ಸರ್ವೇ ನಡೆಸಲಾಗಿದೆ. ಸರಕಾರಿ ಸ್ಥಳದಲ್ಲಿ 43 ಕಡೆ ಜಮೀನು ಮಂಜೂರಾಗಿದ್ದು 5, 6 ಕಡೆ ಅರಣ್ಯ, ಉಳಿದಂತೆ ಖಾಸಗಿ ಸ್ಥಳದಲ್ಲಿದೆ. ಪ್ರತೀ ಟವರ್ 2 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಗೊಳ್ಳಲಿದ್ದು, ತಲಾ 1 ಕೋಟಿ ರೂ, ನಿರ್ಮಾಣ ವೆಚ್ಚ ತಗಲಲಿದೆ. 2 ಕಿ.ಮೀ. ವ್ಯಾಪ್ತಿಯಲ್ಲಿ 4ಜಿ ಸೇವೆ ಲಭ್ಯವಾಗಲಿದ್ದು, ಇದರ ನಿರ್ವಹಣೆಯನ್ನು ಖಾಸಗಿಗೆ ನೀಡಲಾಗುತ್ತದೆ ಎಂದು ಬಿಎಸ್ಸೆನ್ನೆಲ್ ದ.ಕ. ವಿಭಾಗದ ಎಜೆಎಂ ಎಸ್.ಟಿ. ದೇವಾಡಿಗ ತಿಳಿಸಿದ್ದಾರೆ.

ಉಡುಪಿಯಲ್ಲಿ 27 ಟವರ್ ಸ್ಥಾಪಿಸ ಲಾಗಿದ್ದು, ದ.ಕ.ದಲ್ಲಿ 2 ಪೂರ್ಣ ಗೊಂಡಿವೆ. 2ನೇ ಹಂತದಲ್ಲಿ ಉಡುಪಿಯಲ್ಲಿ 9, ದ.ಕ.ದಲ್ಲಿ 64 ಕಡೆ 2024ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಭಯ ಜಿಲ್ಲೆಯಲ್ಲಿ ಈಗಾಗಲೇ ಇರುವ 600ರಷ್ಟು ಹಳೇ 2G ಟವರ್ಗಳನ್ನು ಒಂದೂವರೆ ವರ್ಷದಲ್ಲಿ 4Gಗೆ ಅಪ್ಗ್ರೇಡ್ ಮಾಡಲಾಗುತ್ತದೆ. ಬಿಎಸ್ಸೆನ್ನೆಲ್ ಪಿಜಿಎಂ ನವಿನ್ ಕುಮಾರ್ ಗುಪ್ತ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ 50 ಪ್ರದೇಶಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದ ಕಡೆಗಳಲ್ಲಿ ಸರ್ವೇ ನಡೆಯುತ್ತಿದೆ. ಇದು ಪೂರ್ಣಗೊಂಡ ಕೂಡಲೇ ಗುರುತಿಸಲಾದ ಜಾಗಗಳನ್ನು BSNLಗೆ ಹಸ್ತಾಂತರಿಸಿ ಟವರ್ ನಿರ್ಮಾಣ ಆರಂಭವಾಗಲಿದೆ.

Leave a Comment

Your email address will not be published. Required fields are marked *