ಸಮಗ್ರ ನ್ಯೂಸ್: ರಾಜ್ಯದ ಅನೇಕ ಸೌಲಭ್ಯಗಳನ್ನು ಆನ್ ಲೈನ್ ಗೊಳಿಸಲಾಗಿದೆ. ಈ ಮೊದಲು ಕಛೇರಿಯಿಂದ ಕಛೇರಿಗೆ ದಾಖಲೆಗಾಗಿ ಅಲೆಯಬೇಕಾಗಿದ್ದಂತ ಪರದಾಟಕ್ಕೆ ಬಹುತೇಕ ಬ್ರೇಕ್ ಬಿದ್ದಿದೆ. ಈಗ ಕುಳಿತಲ್ಲಿಯೇ ಕೆಲ ದಾಖಲೆಗಳನ್ನು ಆನ್ ಲೈನ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಹಾಗಾದ್ರೇ ನಿಮ್ಮ ಗ್ರಾಮದ ನಕ್ಷೆಯನ್ನು (Village Map) ಡೌನ್ ಲೋಡ್ ಮಾಡಿಕೊಳ್ಳಲು ಏನು ಮಾಡಬೇಕು? ಎನ್ನುವ ಪ್ರಶ್ನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರದಿಂದ (Karnataka Government) ಜನರಿಗೆ ಮಾಹಿತಿ ಒದಗಿಸೋ ಸಲುವಾಗಿ ಮಾಹಿತಿ ಕಣಜ ಎಂಬ ಜಾಲತಾಣವನ್ನು ಪ್ರಾರಂಭಿಸಲಾಗಿದೆ. ನೀವು https://mahitikanaja.karnataka.gov.in/home# ಗೆ ಕ್ಲಿಕ್ ಮಾಡಿದರೆ, ರಾಜ್ಯ ಸರ್ಕಾರದ ಬಹುತೇಕ ಇಲಾಖೆಯ ಮಾಹಿತಿ ನಿಮ್ಮ ಅಂಗೈನಲ್ಲಿ ಲಭ್ಯವಾಗಲಿದೆ. ಇದು ಕರ್ನಾಟಕ ರಾಜ್ಯ ಮತ್ತು ಅದರ ಜನತೆಗಾಗಿ ಸಾರ್ವಜನಿಕ ನಿಧಿಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರು ತಿಳಿಯುವ ಅವಕಾಶವನ್ನು ಈ ವೆಬ್ ಪೋರ್ಟಲ್ ನೀಡುತ್ತದೆ.
ಪ್ರತಿಯೊಂದೂ ಸಾರ್ವಜನಿಕ ಪ್ರಾಧಿಕಾರವೂ ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ಆದಷ್ಟೂ ಹೆಚ್ಚು ಮಾಹಿತಿಗಳನ್ನು ನಿಯಮಿತವಾಗಿ ಅಂತರಜಾಲ ಸೇರಿದಂತೆ ವಿವಿಧ ಸಂವಹನದ ವಿಧಾನಗಳನ್ನು ಅನುಸರಿಸಿ ನೀಡಲು ನಿರಂತರವಾಗಿ ಯತ್ನಿಸಬೇಕು; ಇದರಿಂದಾಗಿ ಸಾರ್ವಜನಿಕರು ಮಾಹಿತಿಗಳನ್ನು ಪಡೆಯಲು ಈ ಕಾಯ್ದೆಯನ್ನು ಕನಿಷ್ಠ ಪ್ರಮಾಣದಲ್ಲಿ ಬಳಸುವಂತಾಗಬೇಕು” ಎಂಬ ಮಾಹಿತಿ ಪಡೆಯುವ ಹಕ್ಕು ಕಾಯ್ದೆಯ ವಿಧಿ 4(2)ರ ಹೇಳಿಕೆಯನ್ನು ಪಾಲಿಸಿ ಕರ್ನಾಟಕ ಸರ್ಕಾರವು ರೂಪಿಸಿದ ಅಂತರ್ಜಾಲ ಮಾಹಿತಿ ಪ್ರಕಟಣೆ ಇದಾಗಿದೆ.
ಮಾಹಿತಿಯುಕ್ತ ಮತ್ತು ಅಧಿಕಾರಯುಕ್ತ ನಾಗರಿಕರು ರಾಜ್ಯ ಸರ್ಕಾರವು ಉತ್ತಮ ಆಡಳಿತದ ಗುರಿಗಳನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ. ಈ ಪೋರ್ಟಲ್ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಇಲಾಖೆಗಳು ಹೇಗೆ ಸಾರ್ವಜನಿಕ ನಿಧಿಗಳನ್ನು ಬಳಸಿಕೊಳ್ಳುತ್ತಿವೆ ಎಂಬ ವಿವರಗಳನ್ನು ಹಾಗೂ ಫಲಾನುಭಾವಿಗಳ ವಿವರಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಒಮ್ಮೆ ನಾಗರಿಕರು ಜಾಗೃತೆ ವಹಿಸಿದರೆ ಮತ್ತು ಸಾರ್ವಜನಿಕ ವೆಚ್ಚದ ಬಗ್ಗೆ ಅರಿವು ಹೊಂದಿದರೆ ಗ್ರಾಮೀಣ, ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ನಿಧಿಗಳ ಬಳಕೆಯ ನಿರ್ಣಯಗಳ ಶ್ರೇಷ್ಠತೆಗಾಗಿ ಈ ಮೂಲಕ ಸೇವೆ ಒದಗಿಸುತ್ತಿದೆ.
ಈ ಪೋರ್ಟಲ್ ಅನ್ನು ಬಳಸಲು ನಾಗರಿಕರು ಯಾವುದೇ ಬಳಕೆದಾರ ಹೆಸರು ಅಥವಾ ಪಾಸ್‌ವರ್ಡ್ ಬಳಸಬೇಕಿಲ್ಲ. ಈ ಪೋರ್ಟಲ್ ಮೂಲಕ ವ್ಯಾಪಕ ಶ್ರೇಣಿಯ ಮಾಹಿತಿಯನ್ನು ಪಡೆಯಬಹುದು. ಇವುಗಳಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳ ಕಾರ್ಯನಿರ್ವಹಣೆಯ ಮಾಹಿತಿ, ಪಡಿತರ ಕೇಂದ್ರಗಳ ದಾಸ್ತಾನು ಸ್ಥಿತಿ ಮತ್ತು ವಿತರಣಾ ವಿವರಗಳು, ಪಡಿತರ ಮಾರಾಟಗಾರರ ಸಂಪರ್ಕ ವಿವರಗಳು, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಇರುವ ಫಲಾನುಭಾವಿಗಳ ಪಟ್ಟಿ, ಪಿಂಚಣಿ ಫಲಾನುಭಾವಿಗಳ ಪಾವತಿ ವಿವರಗಳು, ಸರ್ಕಾರದ ಗೃಹ ನಿರ್ಮಾಣದ ಫಲಾನುಭಾವಿಗಳ ವಿವರಗಳು, ವಿದ್ಯಾರ್ಥಿ ವೇತನದ ವಿವರಗಳು , ಸಾಲ ಮನ್ನಾ ಯೋಜನೆಗಳು, ಪಾರಿಹಾರ ಯೋಜನೆ, ಪಂಚಾಯತ್ ನ ಜನಪ್ರತಿನಿಧಿಗಳ ಮಾಹಿತಿ, ಪಂಚಾಯತ್ ಅಥವಾ ವಾರ್ಡ್ ಕೆಳಗೆ ಕೈಗೊಂಡ ಕಾಮಗಾರಿಗಳು, ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿವರಗಳು ಸೇರಿದಂತೆ ಹಲವು ಮಾಹಿತಿಗಳಿವೆ.
ನಿಮ್ಮ ಗ್ರಾಮದ ನಕ್ಷೆ ಡೌನ್ ಲೋಡ್ ಮಾಡಲು ಈ ವಿಧಾನ ಅನುಸರಿಸಿ
1.ಇದೇ https://mahitikanaja.karnataka.gov.in/home# ಗೆ ಭೇಟಿ ನೀಡಿ, ನಿಮ್ಮ ಗ್ರಾಮದ ನಕ್ಷೆಯನ್ನು ಪಡೆಯಬಹುದಾಗಿದೆ. ಈ ಕೆಳಗಿನ ಹಂತವನ್ನು ಅನುಸರಿಸಿ, ನಿಮ್ಮ ಗ್ರಾಮದ ನಕ್ಷೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ.
2.ಮಾಹಿತಿ ಕಣಜ ಜಾಲತಾಣದ ನೇರ ಲಿಂಕ್ https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%2520&DepartmentId=2066 ಕ್ಲಿಕ್ ಮಾಡಬೇಕು.
3.ಈ ಪುಟ ತೆರೆದುಕೊಂಡ ನಂತರ ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.
4.ಬಳಿಕ ನಿಮ್ಮ ತಾಲೂಕು ನಮೂದಿಸಿ, ತಾಲೂಕಿನ ಹೋಬಳಿ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
5.ನಿಮ್ಮ ಹೋಬಳಿಯಲ್ಲಿ ಯಾವ ಹಳ್ಳಿಯ ಗ್ರಾಮದ ನಕ್ಷೆ ಬೇಕು ಎಂದು ಆಯ್ಕೆ ಮಾಡಿಕೊಂಡ ಬಳಿಕ ಸಬ್ ಮಿಟ್ ಬಟನ್ ಒತ್ತಿದರೇ ನಿಮ್ಮ ಗ್ರಾಮದ ಸಂಪೂರ್ಣ ನಕ್ಷೆ ನಿಮ್ಮ ಕೈಯಲ್ಲೇ ನೋಡಬಹುದಾಗಿದೆ.
ಒಂದು ವೇಳೆ ನಿಮ್ಮ ಗ್ರಾಮದ ನಕ್ಷೆ ಬೇಕು ಎಂದಾದರೇ ಬಿಡಿಎಫ್ ಫೈಲ್ ಡೌನ್ ಲೋಡ್ ಮಾಡಿಕೊಂಡು ಅದರ ಪ್ರಯೋಜನ ಪಡೆಯಬಹುದಾಗಿದೆ.