ಸಮಗ್ರ ನ್ಯೂಸ್: ಸವಣೂರು ಸೀತರಾಮಯ್ಯ ರೈ ಅವರ ಸಾರಥ್ಯದಲ್ಲಿ ಜು. 29ರಂದು ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ಸಂಭ್ರಮದ ಆಟಿ ಉತ್ಸವ ನಡೆಯಲಿದೆ. ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಯ ಆಟಗಳು, ಸಭಾ ಕಾರ್ಯಕ್ರಮಗಳು ಶನಿವಾರ ಬೆಳಗ್ಗೆ 10 ಗಂಟೆಯಿಂದ 4ಗಂಟೆಯವರೆಗೆ ನಡೆಯಲಿದೆ.
ಆಟಿ ಉತ್ಸವದಲ್ಲಿ ತುಳುವರ ಆಟಿಯ ವಿವಿಧ ಬಗೆಯ ಅಡುಗೆಗಳ ಮಹಾಪೂರವೇ ಪುತ್ತೂರಿನ ದರ್ಬೆಯಲ್ಲಿರುವ ಸನ್ನಿಧಿ ಸಭಾಂಗಣದ ಪ್ರಶಾಂತ್ ಮಹಲ್ ನಲ್ಲಿ ವಿಜೃಂಭನೆಯಿಂದ ನಡೆಯಲಿದೆ. ಆಟಿಯ ಸ್ಪೆಷಲ್ ಬಂಜರ ವನಸ್ ನ ಕೂಪನ್ ಹೋಟೆಲ್ ನ ಕೌಂಟರ್ ನಲ್ಲಿ ಕೂಪನ್ ಪಡೆದುಕೊಂಡು, ಸುಮಾರು 49 ಬಗೆಯ ರುಚಿಕರ ತಿನಿಸುಗಳ ಭೂರಿ ಭೋಜನದ ರುಚಿ ಸವಿಯಬಹುದಾಗಿದೆ.
ತುಳುವರ ಆಟಿಯ ಅಟಿಲ್ ನಲ್ಲಿ ಬೆಳಗ್ಗೆ ಚಾ ತಿಂಡಿ ಹೆಸರು ಕಾಳಿನ ಹಾಲು (ಪಾನೀಯ), ಪತ್ರೊಡೆ, ಅವಲಕ್ಕಿ. ಪೂರ್ವಾಹ್ನ ೧೧ ಗಂಟೆಗೆ ತೆಲಿ. ಮಧ್ಯಾಹ್ನ ೧ಗಂಟೆಗೆ ಆಟಿಯ ವಿಶೇಷ ವೈವಿಧ್ಯಮಯ ಊಟ ಮೂರು ಬಗೆಯ ಉಪ್ಪಿನಕಾಯಿ (ಮಾವಿನ ಕಾಯಿ, ಅಂಬಟೆ, ಕ್ರೀಡೆ ಕಾಯಿ), ಒಂದೆಲಗ (ತಿಮರೆ) ಚಟ್ನಿ, ಹುರುಳಿ ಕಾಳು ಚಟ್ನಿ, ಪೂಂಬೆ ಚಟ್ನಿ, ಮುಳ್ಳುಸೌತೆ ತಲ್ಲಿ, ಕೋಸಂಬರಿ, ತಜಂಕ್, ಹಲಸಿನ ಬೀಜದ ಸುಕ್ಕ, ಕಣಿಲೆ ಸುಕ್ಕ ಸವಿಯ ಬನ್ನಿ.