Ad Widget .

ಕ್ಯಾನ್ಸರ್​ನಿಂದ ಮರಣ ಪ್ರಮಾಣ ಹೆಚ್ಚಳ| ಆತಂಕ ತರಿಸಿದ ವೈದ್ಯಕೀಯ ವರದಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕ್ಯಾನ್ಸರ್​ ರೋಗಿಗಳ ಸಾವಿನ ಪ್ರಮಾಣ ಏರಿಕೆಯಾಗಿದ್ದು, ಏಳು ತಿಂಗಳಲ್ಲಿ 600 ಕ್ಕೂ ಅಧಿಕ ರೋಗಿಗಳು ಸಾವನ್ನಪ್ಪಿರೋದು ಭಯವನ್ನುಂಟು ಮಾಡಿದೆ. ಇದೀಗ ದೇಶದಲ್ಲಿ ಗುಜರಾತ್ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳದ ಜೊತೆಯಲ್ಲಿ ಮರಣ ಪ್ರಮಾಣ ಕೂಡ ಹೆಚ್ಚಳವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

2020 ರಲ್ಲಿ ಅಂದಾಜು 85,968 ಪ್ರಕರಣಗಳು ಬೆಳಕಿಗೆ ಬಂದಿದ್ದವು. 2021 ರಲ್ಲಿ 88,126 ಮತ್ತು 2022 ರಲ್ಲಿನ 90,349 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಇನ್ನು ಕಳೆದ ಏಳು ತಿಂಗಳಲ್ಲಿ 14 ಸಾವಿರ ಪ್ರಕರಣಗಳು ದಾಖಲಾಗಿದ್ದು, 600 ಕ್ಕೂ ಅಧಿಕ ರೋಗಿಗಳು ಮೃತರಾಗಿದ್ದಾರ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Ad Widget . Ad Widget . Ad Widget .

ಈ ಮೊದಲು ಕರ್ನಾಟಕದಲ್ಲಿ ವರ್ಷಕ್ಕೆ 400 ರಿಂದ 600 ಕ್ಯಾನ್ಸರ್ ರೋಗಿಗಳು ಮೃತರಾಗುತ್ತಿದ್ದರು. ಪ್ರಸಕ್ತ ವರ್ಷ ದಲ್ಲಿ ಏಳು ತಿಂಗಳೊಳಗೆ ಮೃತ ರೋಗಿಗಳ ಸಂಖ್ಯೆ 600 ರ ಗಡಿ ದಾಟಿದೆ. ತಂಬಾಕು ಸೇವನೆಯಿಂದ ಮಾರಣಾಂತಿಕ ಕಾಯಿಲೆಯಾಗಿರುವ ಕ್ಯಾನ್ಸರ್​​ಗೆ ಜನರು ತುತ್ತಾಗುತ್ತಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಜನರು ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಿರುವ ಆಘಾತಕಾರಿ ಮಾಹಿತಿ ಹೊರ ಬಂದಿದೆ.

ಸರ್ಕಾರವು ಕ್ಯಾನ್ಸರ್ ನಿಯಂತ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ತುರ್ತು ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 2025 ರ ವೇಳೆಗೆ ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚುವ ಆತಂಕ ಎದುರಾಗಿದೆ ಎಂದು ತಜ್ಞರು ಹೇಳುತ್ತಾರೆ. 2025 ರಲ್ಲಿ 97,130 ವರೆಗೂ ಹೆಚ್ಚಾಗುವ ಅಂದಾಜು ಮಾಡಲಾಗಿದೆ.

ಸಾವಿನ ಪ್ರಮಾಣ ಹೆಚ್ಚಾಗಲು ಕಾರಣಗಳೇನು?
ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ರೋಗಿಗಳು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರೋದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ. ಕ್ಯಾನ್ಸರ್ ಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಇವೆ. ರೋಗಿಗಳು ರೋಗ ಅಂತಿಮ ಹಂತಕ್ಕೆ ತಲುಪಿದಾಗ ಅಂದ್ರೆ ನಾಲ್ಕನೇ ಹಂತದಲ್ಲಿರುವಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ,ಇದರಿಂದ ರೋಗಿಗಳಿಗೆ ನೀಡಲಾಗುತ್ತಿರುವ ಔಷಧ ಗುಣಮಟ್ಟದಲ್ಲಿ ಸಮಸ್ಯೆ ಇದೆ, ಉಚಿತ ಚಿಕಿತ್ಸೆ ಪಡೆಯಲು ರೋಗಿಗಳು ವಾಜಪೇಯಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬೇಕು ಆದರೆ ಈ ಪ್ರಕ್ರಿಯೆ ವಿಳಂಬವಾಗ್ತಿದೆ

Leave a Comment

Your email address will not be published. Required fields are marked *