ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯಿಂದ ನಲುಗಿರುವಂತ ಜನರಿಗೆ, ಬ್ಲ್ಯಾಕ್ ಫೆಂಗಸ್ ಕಾಟ ಹೆಚ್ಚಾಗಿತ್ತು. ಕೊರೋನಾ, ಬ್ಲ್ಯಾಕ್ ಫಂಗಸ್ ರೋಗದ ನಡುವೆಯೂ ಈಗ ಅನೇಕ ದೇಶ, ರಾಜ್ಯಗಳಲ್ಲಿ ಕಾರಣಿಸಿಕೊಂಡಿದ್ದಂತ ಡೆಲ್ಟಾ ಪ್ಲಸ್ ರೋಗವು, ರಾಜ್ಯಕ್ಕೂ ಕಾಲಿಟ್ಟಿದೆ.
ಈ ಮೂಲಕ ಜನರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.
ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ, ಕೊರೋನಾ 3ನೇ ಅಲೆಯ ಭೀತಿ ರಾಜ್ಯದಲ್ಲಿ ಆರಂಭಗೊಂಡಿದೆ. ಕೊರೋನಾ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕಾಗಿ, ನಿಯಂತ್ರಣ ಕ್ರಮಗಳ ಕುರಿತಂತೆ, ಮಹತ್ವದ ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ.
ಇದರ ಮಧ್ಯೆ ಬೇರೆ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದಂತ ಡೆಲ್ಟಾ ಪ್ಲೆಸ್ ರೋಗವು, ಈಗ ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಬ್ಬಬ್ಬರು ಸೇರಿದಂತೆ ಇಬ್ಬರಲ್ಲಿ ಡೆಲ್ಟಾ ಪ್ಲಸ್ ರೋಗ ಕಾಣಿಸಿಕೊಂಡಿರೋದು ದೃಢಪಟ್ಟಿದೆ. ಈ ಮೂಲಕ ಜನರಲ್ಲಿ ಮತ್ತಷ್ಟು ಭಯವನ್ನು ಹುಟ್ಟು ಹಾಕಿದೆ.