Ad Widget .

ಸುಳ್ಯ: ಭಾರೀ ಮಳೆ ಹಿನ್ನೆಲೆ | ಈ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಕ್ಲಸ್ಟರ್ ನ ಎಲ್ಲಾ ಶಾಲೆಗಳಿಗೆ ಹಾಗೂ ಸುಬ್ರಹ್ಮಣ್ಯ ಕ್ಲಸ್ಟರ್ ನ ಆಯ್ದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ.

Ad Widget . Ad Widget .

ಸುಬ್ರಹ್ಮಣ್ಯ ಕ್ಲಸ್ಟರ್ ಗೊಳಪಡುವ – ‌ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ,
ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಲ್ಕುಂದ, ಹರಿಹರ ಕ್ಲಸ್ಟರ್ ನ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.

Ad Widget . Ad Widget .

ಈ ಮೇಲಿನ ಶಾಲೆಗಳಿಗೆ ಇಂದು ದಿನಾಂಕ 24-7-2023ರಂದು ಮಳೆ ಕಾರಣ ರಜೆ ಘೋಷಿಸಲಾಗಿದೆ. ಈ ದಿನದ ರಜೆಯನ್ನು ಮುಂದಿನ 2 ಶನಿವಾರಗಳಂದು ತರಗತಿ ನಡೆಸಿ ಮರುಹೊಂದಿಸಲು ಸೂಚಿಸಿದೆ.
ಶಾಲಾ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ರಸ್ತೆ ಸೇತುವೆ ಸಂಪರ್ಕ ಕಡಿತಗೊಂಡು ವಿದ್ಯಾರ್ಥಿಗಳು ಶಾಲೆಗೆ‌ ಹಾಜರಾಗಲು ಅನಾನುಕೂಲ ಇದ್ದಲ್ಲಿ ಅಂತಹ ಶಾಲೆಗಳು ಕೂಡಾ ಇಂದು ದಿನಾಂಕ 24-7-2023ರಂದು ರಜೆಯನ್ನು ಘೋಷಿಸುವುದು.

ರಜೆ ನೀಡುವ ಶಾಲೆಗಳು ಮಾಹಿತಿಯನ್ನು ತಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ತುರ್ತಾಗಿ ನೀಡುವಂತೆ ಸೂಚಿಸಿದೆ. (ರಜೆಯನ್ನು ಮುಂದಿನ 2 ಶನಿವಾರಗಳಂದು ತರಗತಿ ನಡೆಸಿ ಮರುಹೊಂದಿಸಲು ತಿಳಿಸಿದೆ.) ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *