ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಸಬ್ಸಿಡಿ ಟೊಮೆಟೊ ಬೆಲೆಯನ್ನು ಗುರುವಾರದಿಂದ ಪ್ರತಿ ಕೆ.ಜಿ.ಗೆ 80 ರೂ.ಗಳಿಂದ 70 ರೂ.ಗೆ ಇಳಿಸಿದೆ.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ಮೂಲಕ ದೆಹಲಿ-ಎನ್ಸಿಆರ್ ಮತ್ತು ಇತರ ಕೆಲವು ಪ್ರಮುಖ ನಗರಗಳಲ್ಲಿ ಕೇಂದ್ರವು ಜನರಿಗೆ ಕೆಜಿಗೆ 80 ರೂ.ಗಳ ಸಬ್ಸಿಡಿ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡುತ್ತಿದೆ.
ಟೊಮ್ಯಾಟೊದ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಗಳು ಪ್ರತಿ ಕೆ.ಜಿ.ಗೆ ಸುಮಾರು 120 ರಷ್ಟಿದೆ. ಆದಾಗ್ಯೂ ಪ್ರಮುಖ ಅಡುಗೆ ವಸ್ತುವು ಕೆಲವು ಸ್ಥಳಗಳಲ್ಲಿ ಪ್ರತಿ ಕೆ.ಜಿ.ಗೆ 245 ರೂ.ವರೆಗೆ ಮಾರಾಟವಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ದರ ಪ್ರತಿ ಕೆ.ಜಿ.ಗೆ 120 ರೂ.ಗೆ ಮಾರಾಟ ಮಾಡಲಾಗ್ತಿದೆ.
ಎನ್ಸಿಸಿಎಫ್ ಮತ್ತು ನಾಫೆಡ್ ಸಂಗ್ರಹಿಸಿದ ಟೊಮೆಟೊಗಳನ್ನು ಆರಂಭದಲ್ಲಿ ಪ್ರತಿ ಕೆ.ಜಿ.ಗೆ 90 ರೂ.ಗೆ ಮಾರಾಟ ಮಾಡಲಾಯಿತು ಮತ್ತು ನಂತರ ಜುಲೈ 16, 2023 ರಿಂದ ಪ್ರತಿ ಕೆ.ಜಿ.ಗೆ 80 ರೂ.ಗೆ ಇಳಿಸಲಾಯಿತು. ಕೆ.ಜಿ.ಗೆ 70 ರೂ.ಗೆ ಇಳಿಸುವುದರಿಂದ ಗ್ರಾಹಕರಿಗೆ ಮತ್ತಷ್ಟು ಪ್ರಯೋಜನವಾಗಲಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.