ಸಮಗ್ರ ನ್ಯೂಸ್: ಹೆಣ್ಮಕ್ಕಳಿಗೆಂದು ಎಲ್ಐಸಿ ಕೆಲವಾರು ಉತ್ತಮ ಪಾಲಿಸಿಗಳನ್ನು ಹೊಂದಿದೆ . ಎಲ್ಐಸಿ ಜೀವನ್ ತರುಣ್ , ಎಲ್ಐಸಿ ಕನ್ಯಾದಾನ್ ಪಾಲಿಸಿ , ಎಲ್ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್ , ಎಲ್ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್ ಇತ್ಯಾದಿ ಯೋಜನೆಗಳಿವೆ . ಹೆಣ್ಮಗು ದೊಡ್ಡವಳಾಗಿ ಆಕೆಯ ಶಿಕ್ಷಣವೆಚ್ಚ ಮತ್ತು ವಿವಾಹವೆಚ್ಚಗಳಿಗೆ ಬೇಕರುವ ಹಣದ ಅಗತ್ಯಗಳನ್ನು ಈ ಪಾಲಿಸಿಗಳು ನೀಡುತ್ತವೆ.
ಈ ಪೈಕಿ ಎಲ್ಐಸಿ ಕನ್ಯಾದಾನ್ ಪಾಲಿಸಿ ಹೆಚ್ಚು ಗಮನ ಸೆಳೆಯುತ್ತಿದೆ . ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಸ್ಕೀಮ್ ಪಡೆಯಬಹುದು . ತಂದೆ , ತಾಯಿ ಅಥವಾ ಬೇರೆ ಪಾಲಕರು 18 ರಿಂದ 50 ವರ್ಷ ವಯೋಮಾನದವರು ಎಲ್ಐಸಿ ಕನ್ಯಾದಾನ್ ಪ್ಲಾನ್ ಆರಂಭಿಸಲು ಸಾಧ್ಯ . ಪಾಲಿಸಿ ಅವಧಿ 13 ರಿಂದ 25 ವರ್ಷದವರೆಗೂ ಇರುತ್ತದೆ.
ಎಲ್ಐಸಿ ಕನ್ಯಾದಾನ್ ಪಾಲಿಸಿ 2023 ಮುಖ್ಯಾಂಶಗಳು:-
ಅನಿವಾಸಿ ಭಾರತೀಯ ಸೇರಿದಂತೆ ಯಾವುದೇ ಭಾರತೀಯ ವ್ಯಕ್ತಿ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು.
ಪಾಲಿಸಿ ಪಡೆಯಲು ಹೆಣ್ಮಗುವಿನ ವಯಸ್ಸು ಕನಿಷ್ಠ 1 ವರ್ಷ ಆಗಿರಬೇಕು. ಹೆಣ್ಮಗುವಿನ ಹೆಸರಿನಲ್ಲಿ ಪಾಲಕರು ಪಾಲಿಸಿ ಆರಂಭಿಸಬಹುದು. ಪಾಲಕರ ವಯಸ್ಸು 18ರಿಂದ 50 ವರ್ಷ ಇರಬೇಕು.
ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇರುತ್ತದೆ. ದಿನಕ್ಕೆ 75ರೂನಂತೆ ನೀವು ಈ ಪಾಲಿಸಿಗೆ ಹೂಡಿಕೆ ಮಾಡಿದರೆ 25 ವರ್ಷ ಬಳಿಕ 14 ಲಕ್ಷ ರೂ ರಿಟರ್ನ್ ಸಿಗುತ್ತದೆ.
ಪಾಲಿಸಿ ಅವಧಿಗಿಂತ ಮುಂಚಿನ 3 ವರ್ಷಗಳವರೆಗೆ ಮಾತ್ರ ಪ್ರೀಮಿಯಮ್ ಪಾವತಿ.
ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ
ಫಲಾನುಭವಿಗೆ ಸಹಜ ಸಾವು ಸಂಭವಿಸಿದರೆ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸಿಗುತ್ತದೆ
ಸತತ 3 ವರ್ಷ ನೀವು ಪ್ರೀಮಿಯಮ್ ಕಟ್ಟಿದ್ದರೆ ಪಾಲಿಸಿ ಅಡ ಇಟ್ಟು ಸಾಲ ಪಡೆಯಬಹುದು. ನೀವು ಆವರೆಗೆ ಕಟ್ಟಿರುವ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ ಸಾಲ ಸಿಗುತ್ತದೆ.
ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಇರುವುದಿಲ್ಲ. ಟ್ಯಾಕ್ಸ್ ಡಿಡಕ್ಷನ್ಗೂ ಇದು ಸಹಾಯಕವಾಗುತ್ತದೆ.
ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಮ್ ಕಟ್ಟುವುದನ್ನು ಮುಂದುವರಿಸುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಕುಟುಂಬಕ್ಕೆ ಪ್ರತೀ ವರ್ಷ 1 ಲಕ್ಷ ರೂ ಪರಿಹಾರ ಸಿಗುತ್ತಿರುತ್ತದೆ.