ಸಮಗ್ರ ನ್ಯೂಸ್: ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಸರದಿ ಸಾಲಲ್ಲಿ ಊಟಕ್ಕೆ ಕೂತ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತ ‘ಅಸತೋಮ ಸದ್ಗಮಯ’ ಪ್ರಾರ್ಥನೆ ಮಾಡಿ ಮಕ್ಕಳ ಜೊತೆಯೇ ಓಳಿಗೆ ಊಟ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸ್ವಗ್ರಾಮ ಯಗಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆಯೇ ಊಟ ಮಾಡಿದ್ದಾರೆ. ಅದೇ ಶಾಲೆಯಲ್ಲಿ ಓದಿ ಬೆಳೆದ ದತ್ತ ಅವರ ಸಹೋದರಿ ವೈ.ಎಸ್. ವಿಜಯಲಕ್ಷ್ಮಿಯವರ ಸ್ಮರಣಾರ್ಥ ಮಕ್ಕಳಿಗೆ ಬಸವಣ್ಣ, ಡಿವಿಜಿ ಹಾಗೂ ಅಂಬೇಡ್ಕರ್ ಅವರ ಪುಸ್ತಕಗಳ ಜೊತೆ ಓದಿನ ಸಾಮಾಗ್ರಿಗಳನ್ನ ನೀಡಿದ್ದಾರೆ.
ಮನುಷ್ಯ ಎಷ್ಟೇ ಅತ್ಯುನ್ನತ ಸ್ಥಾನಕ್ಕೆ ಹೋದರೂ ತಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಯೊಡನೆ ಸದಾ ಸಂಪರ್ಕವಿಟ್ಟುಕೊಂಡು ಆ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದ್ದಿದ್ದಾರೆ. 153 ವರ್ಷಗಳ ಹಿಂದಿನ ಈ ಶಾಲೆ ರಾಜ್ಯವ್ಯಾಪಿ ದೊಡ್ಡ ಕೊಡುಗೆ ನೀಡಿದೆ. ಇಲ್ಲಿ ವ್ಯಾಸಂಗ ಪಡೆದ ಅನೇಕರು ಅತ್ಯುನ್ನತ ಹುದ್ದೆಗೇರಿದ್ದಾರೆ. ಅವರಲ್ಲಿ ವಿಜಯಲಕ್ಷ್ಮಿ ಕೂಡ ಒಬ್ಬರು. ಅವರು ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಬಹು ದೊಡ್ಡ ಜ್ಞಾನ ಹೊಂದಿದ್ದರು. ರಾಮಕೃಷ್ಣ ಹೆಗ್ಗಡೆಯವರು ಸಿಎಂ ಆಗಿದ್ದಾಗ ರೂಪಿಸಿದ ಹಲವು ಯೋಜನೆಗಳಿಗೆ ಹೆಸರು ಸೂಚಿಸುತ್ತಿದ್ದರು. ಅಂತಹ ದೊಡ್ಡ ಜ್ಞಾನ ಸಂಪಾದಿಸಿದ್ದ ವಿಜಯಲಕ್ಷ್ಮಿ ಶಿಕ್ಷಣ ಪ್ರೇಮಿಯಾಗಿದ್ದರು ಎಂದು ಇದೇ ಸಂದರ್ಭದಲ್ಲಿ ದತ್ತಾ ಹೇಳಿದರು.